ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ರಿಂದ ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್

Last Updated 20 ಜನವರಿ 2012, 19:35 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನನಗರಿಯಲ್ಲಿ ಜನವರಿ 24ರಿಂದ 28ರ ವರೆಗೆ 49ನೇ ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ನಡೆಯಲಿದೆ.

ಬನಶಂಕರಿಯ ಎರಡನೇ ಹಂತದಲ್ಲಿರುವ ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿನ ಮೈದಾನದಲ್ಲಿ ಈ ಚಾಂಪಿಯನ್‌ಷಿಪ್‌ನ ಸ್ಪರ್ಧೆಗಳು ನಡೆಯಲಿದೆ. 20 ರಾಜ್ಯಗಳ ಸ್ಪರ್ಧಿಗಳು ಇಲ್ಲಿ ಪೈಪೋಟಿ ನಡೆಸಲಿದ್ದಾರೆ. ಕಳೆದ ವರ್ಷದ ಚಾಂಪಿಯನ್ ಆತಿಥೇಯ ಕರ್ನಾಟಕ ತಂಡದಲ್ಲಿ ಒಟ್ಟು 68 ಸ್ಪರ್ಧಿಗಳಿದ್ದಾರೆ.

`ಕಳೆದ ವರ್ಷದಂತೆ ಈ ವರ್ಷವೂ ಚಾಂಪಿಯನ್ ಆಗಬೇಕು ಎನ್ನುವ ಗುರಿಯಿದೆ. ಆದಕ್ಕಾಗಿ ನಮ್ಮ ಸ್ಪರ್ಧಿಗಳು ಕಠಿಣ ಅಭ್ಯಾಸ ನಡೆಸಿದ್ದಾರೆ~ ಎಂದು ಕರ್ನಾಟಕ ತಂಡದ ಕೋಚ್ ಶ್ರೀಕಾಂತ್‌ರಾವ್ `ಪ್ರಜಾವಾಣಿ~ಗೆ ತಿಳಿಸಿದರು.

ವರ್ಷಾ ಎಸ್. ಪುರಾಣಿಕ (ಮಹಿಳೆಯರ ಶಾರ್ಟ್ ಸ್ಪರ್ಧೆ), ಆಕಾಶ್ ಆರಾಧ್ಯ (ಪುರುಷರ ವಿಭಾಗ), ಲಾಂಗ್ ಡಿಸ್ಟೆನ್ಸ್ ವಿಭಾಗದಲ್ಲಿ ಎಚ್.ಎ. ಪ್ರಜ್ಞಾ, 16 ವರ್ಷದೊಳಗಿನವರ ವಿಭಾಗದಲ್ಲಿ ಅಖಿಲರಾಯ್ ಚೌದ್ರಿ ಹಾಗೂ ಪೃಥಿರಾಜ್ ಈ ವರ್ಷ ಪ್ರಶಸ್ತಿ ಜಯಿಸುವ ಕರ್ನಾಟಕದ ನೆಚ್ಚಿನ ಸ್ಪರ್ಧಿಗಳೆನ್ನಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT