ಹಾಂಕಾಂಗ್ (ಎಎಫ್ಪಿ): ವಿಶ್ವದ ಎರಡನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೀನಾದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 2015ರಲ್ಲಿ ಕಾಲು ಶತಮಾನದ ಹಿಂದಿನ ಮಟ್ಟವಾದ ಶೇ 6.9ಕ್ಕೆ ಕುಸಿದಿದೆ.

ಚೀನಾದ ಜಿಡಿಪಿ ದಾಖಲೆ ಪ್ರಮಾಣದಲ್ಲಿ ಕುಸಿದಿರುವುದು ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ತಲ್ಲಣ ಮೂಡಿಸಿದೆ. 2015ರಲ್ಲಿ ಕನಿಷ್ಠ ಶೇ 7ರಷ್ಟಾದರೂ ಜಿಡಿಪಿ ಪ್ರಗತಿಯನ್ನು ಚೀನಾ ಸರ್ಕಾರ ಅಂದಾಜು ಮಾಡಿತ್ತು. ಆದರೆ, ಕೇವಲ ಶೇ 6.9ರಷ್ಟು ಪ್ರಗತಿ ದಾಖಲಾಗಿದೆ. ಇದರಿಂದ ಜಾಗತಿಕ ಹೂಡಿಕೆ ಪ್ರಮಾಣ ಗಣನೀಯವಾಗಿ ತಗ್ಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

ಕಳೆದ ಆರು ತಿಂಗಳಿಂದ ಚೀನಾದ ಆರ್ಥಿಕ ವೃದ್ಧಿ ದರ ಗಣನೀಯವಾಗಿ ಕುಸಿಯುತ್ತಿದೆ. ಜಾಗತಿಕ ಹೂಡಿಕೆ ಪ್ರಮಾಣ ತಗ್ಗಿರುವುದರಿಂದ ಕಳೆದ 3 ತಿಂಗಳಲ್ಲಿ ಸರಾಸರಿ ಶೇ 6.8ರಷ್ಟು ಮಾತ್ರ ಪ್ರಗತಿ ದಾಖಲಾಗಿದೆ ಎಂದು ಚೀನಾದ ರಾಷ್ಟ್ರೀಯ ಅಂಕಿಸಂಖ್ಯೆಗಳ ಇಲಾಖೆ (ಎನ್ಬಿಎಸ್) ಹೇಳಿದೆ.

ಆರ್ಥಿಕ ವೃದ್ಧಿ ದರ 25 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿರುವುದರಿಂದ ಶಾಂಘೈ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಪಾತಾಳಕ್ಕೆ ಕುಸಿದಿದೆ. ಹೊಸ ವರ್ಷದಲ್ಲಿ ಇದುವರೆಗೆ ಸೂಚ್ಯಂಕ ಶೇ 20ರಷ್ಟು ಹಾನಿ ಅನುಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.