ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ಕ್ಕೆ ಚಂದ್ರ-ಶುಕ್ರ ಗ್ರಹ ಒಟ್ಟಿಗೇ ಗೋಚರ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ನಭೋಮಂಡಲದಲ್ಲಿ ಇದೇ 26ರಂದು ವಿಸ್ಮಯವೊಂದು ಗೋಚರಿಸಲಿದ್ದು, ಚಂದ್ರ ಮತ್ತು ಶುಕ್ರ ಗ್ರಹಗಳು ಒಟ್ಟಿಗೇ ಕಾಣಿಸಿಕೊಳ್ಳಲಿವೆ.

ಅಂದು ಕತ್ತಲು ಆವರಿಸುತ್ತಿದ್ದಂತೆಯೇ ಪಶ್ಚಿಮ ಸಮಾನಂತರ ರೇಖೆಯಲ್ಲಿ ಶುಭ್ರವಾಗಿ ಹೊಳೆಯುವ ಶುಕ್ರ ಗ್ರಹ ಗೋಚರಿಸಲಿದೆ. ಅದರ ಬಲಕ್ಕೆ ತಿಳಿಯಾದ ಅರ್ಧ ಚಂದ್ರ ಗೋಚರಿಸಲಿದೆ. ಚಂದ್ರನ ಹೊಳೆಯುವ ಒಂದು ಮುಖದ ಹೊರತಾಗಿಯೂ ಕತ್ತಲು ಆವರಿಸಿದ ಭಾಗ ಕೂಡ ಅಂದು ಕಾಣುತ್ತದೆ.

ಹೀಗಾಗಿ ವಿಜ್ಞಾನಿಗಳು ಈ ಸ್ಥಿತಿಯನ್ನು `ಹೊಸ ಚಂದ್ರನ ಬಾಹುಗಳಲ್ಲಿ ಹಳೆಯ ಚಂದ್ರಮ~ ಎಂದು ಬಣ್ಣಿಸುತ್ತಾರೆ ಎಂದು ನೆಹರೂ ತಾರಾಲಯದ ನಿರ್ದೇಶಕ ಅರವಿಂದ್ ಪರಾಂಜಪೆ ತಿಳಿಸಿದ್ದಾರೆ. ಚಂದ್ರ ಮತ್ತು ಶುಕ್ರ ಒಟ್ಟಿಗೇ ಕಾಣಿಸಿಕೊಳ್ಳುವ ದೃಶ್ಯ ಅಪರೂಪವಾದರೂ, ಯಾವುದೇ ಪರಿಣಾಮಗಳು ಕಂಡುಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT