ಮೈಸೂರು: ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆಪ್ಟೆಂಬರ್ 28ರಿಂದ ಅಕ್ಟೋಬರ್ 5ರವರೆಗೆ ನಡೆಯಲಿವೆ.

ಅರಮನೆ ವೇದಿಕೆ, ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮ ಸಭಾಂಗಣದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ 138 ಕಲಾತಂಡಗಳು ಮತ್ತು ಕಲಾವಿದರು ಭಾಗವಹಿಸುವರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮೈಸೂರು ದಸರಾ ಸಾಂಸ್ಕೃತಿಕ ಉಪಸಮಿತಿ ಅಧ್ಯಕ್ಷ ಕಾಶಿ ವಿಶ್ವನಾಥಶೆಟ್ಟಿ, `ಸೆ. 28ರಂದು ಸಂಜೆ 6 ಗಂಟೆಗೆ ಅರಮನೆ ವೇದಿಕೆಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಈ ವೇದಿಕೆಯಲ್ಲಿ ಅಕ್ಟೋಬರ್ 4ರವರೆಗೆ ಸಂಗೀತ, ನೃತ್ಯ ಸೇರಿದಂತೆ ವಾದ್ಯ ಮೇಳಗಳು ಮೊಳಗಲಿವೆ. ಚಂಡೆಮದ್ದಳೆ, ಪಂಡಿತ್ ರಾಜೀವ ತಾರಾನಾಥ ಅವರ ಸರೋದ ವಾದನ, ಪುಣೆಯ ಪಂಡಿತ್ ಉಲ್ಲಾಸ್ ಕುಶಾಲ್ಕರ್ ಅವರ ಹಿಂದೂಸ್ತಾನಿ ಸಂಗೀತವು ಮೊದಲ ದಿನದ ಆಕರ್ಷಣೆಯಾಗಲಿವೆ~ ಎಂದು ವಿವರಿಸಿದರು.

`ನೃತ್ಯ ವೈವಿಧ್ಯ, ಲಾವಣ್ಯ ಸುಬ್ಬಲಕ್ಷ್ಮೀಯವರ ಸ್ಯಾಕ್ಸೋಫೋನ್, ವಿದ್ವಾನ್ ಆನೂರು ಅನಂತಕೃಷ್ಣಶರ್ಮರ ಲಯವಾದ್ಯ ಲಹರಿ, ಉಷಾ ಮಂಗೇಶ್ಕರ್ ಅವರಿಂದ ಭಕ್ತಿಗೀತೆ ಜೊತೆಗೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಹೆಸರಾಂತ ಕಲಾವಿದರಾದ ಪದ್ಮಾ ಮೂರ್ತಿ, ರಾಧಿಕಾ ನಂದಕುಮಾರ, ಚೈತನ್ಯ ಶ್ಯಾಂ ಭಟ್, ವರದರಂಗನ್, ಎಂ.ಡಿ. ಪಲ್ಲವಿ, ವಿದ್ವಾನ್ ಪ್ರಾಣೇಶ್, ಅನೂರ್ ಅನಂತಕೃಷ್ಣಶರ್ಮ, ಬಿಕ್ರಂ ಘೋಷ್, ನಿತ್ಯಶ್ರೀ ಮಹಾದೇವನ್ ಅವರ ಕಲಾಪ್ರದರ್ಶನವನ್ನು ಸವಿಯುವ ಒದಗಿಬಂದಿದೆ~ ಎಂದು ಹೇಳಿದರು.

`ಜಗನ್ಮೋಹನ ಅರಮನೆಯಲ್ಲಿ ಸೆ. 28ರಿಂದ ಅ, 5ರವರೆಗೆ ಸಂಗೀತ, ನೃತ್ಯ, ಜಾನಪದ, ಕಲಾವಿರ ಪ್ರತಿಭೆ ಅನಾವರಣಗೊಳ್ಳಲಿದೆ. ಈ ವೇದಿಕೆಯಲ್ಲಿ ಒಟ್ಟು 32 ಕಲಾತಂಡಗಳು ಭಾಗವಹಿಸಲಿವೆ. ಕಲಾಮಂದಿರದಲ್ಲಿ ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಕವ್ವಾಲಿ, ನಾದಸ್ವರ, ಪೂಜಾ ಕುಣಿತ ಕಾರ್ಯಕ್ರಮಗಳು ನಡೆಯುತ್ತವೆ.

ಗಾನಭಾರತೀ ವೇದಿಕೆಯಲ್ಲಿ ಶಿಶುನಾಳ ಶರೀಫರ ಹಾಡುಗಳು, ಸುಗಮ ಸಂಗೀತ, ದಾಲಪಟಾ, ಕೊಳಲುವಾದನ, ರಂಗಗೀತಿ, ನಾಟಕ, ಬಾನ್ಸುರಿ ಕಾರ್ಯಕ್ರಮಗಳು ನಡೆಯಲಿವೆ~ ಎಂದು ಹೇಳಿದರು.

`ಈ ಬಾರಿ ಸಾಂಸ್ಕೃತಿಕ ದಸರಾಕ್ಕೆ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 1.25ರಿಂದ ಒಂದೂವರೆ ಕೋಟಿ ರೂಪಾಯಿ ಅಂದಾಜು ವೆಚ್ಚವಾಗುವ ನಿರೀಕ್ಷೆಯಿದೆ. ರಾಜ್ಯದ ಎಲ್ಲ ಭಾಗಗಳಿಂದಲೂ ಕಲಾವಿದರಿಗೆ ಅವಕಾಶ ನೀಡಲಾಗಿದ್ದು, ಹೊರರಾಜ್ಯಗಳ ಕಲಾವಿದರೂ ಭಾಗವಹಿಸುವರು~ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಸಮಿತಿ ಉಪವಿಶೇಷಾಧಿಕಾರಿ ಡಾ. ಸಿ.ಜಿ. ಬೆಟಸೂರಮಠ, ಉಪಾಧ್ಯಕ್ಷ ಎಚ್.ಎಂ. ಬಾಲಸುಬ್ರಮಣ್ಯಂ, ಎಸ್. ನಾಗರಾಜು, ಕಾರ್ಯದರ್ಶಿ ಟಿ.ಎಸ್. ಬಾಲಸುಬ್ರಮಣ್ಯ, ಸಹಕಾರ್ಯದರ್ಶಿ ನಿರ್ಮಲಾ ಮಠಪತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.