ಶನಿವಾರ, ಜನವರಿ 18, 2020
19 °C

28ರಿಂದ ‘ಹಳಕಟ್ಟಿ ವಚನೋತ್ಸವ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ವಚನ ಸಾಹಿತ್ಯ, ಸಂಸ್ಕೃತಿ­ಯನ್ನು ಬೆಳೆಸುವಲ್ಲಿ ಪ್ರಮುಖರಾದ ಡಾ. ಫ.ಗು ಹಳಕಟ್ಟಿ ಅವರ ನೆನಪಿನಲ್ಲಿ ಆಯೋಜಿಸಲಿರುವ ‘ಹಳಕಟ್ಟಿ –ವಚನೋತ್ಸವ’ದ ಏಳನೇ ರಾಷ್ಟ್ರೀಯ ಸಮ್ಮೇಳನ ಇದೇ 28 ಮತ್ತು 29ರಂದು ನಗರದಲ್ಲಿ ನಡೆಯಲಿದ್ದು, ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಸಮ್ಮೇಳ­ನಾಧ್ಯಕ್ಷರಾಗಿದ್ದಾರೆ.ಎರಡು ದಿನ ನಗರದ ರಂಗ­ಮಂದಿರದಲ್ಲಿ ಸಮ್ಮೇಳನದ ನಿಮಿತ್ತ ವಿವಿಧ ಗೋಷ್ಠಿಗಳು, ವಚನ ಗಾಯನ, ನಡೆಯಲಿದ್ದು, ಇದೇ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರಗಳ ಐವರು ಪ್ರಮುಖರಿಗೆ ‘ಹಳಗಟ್ಟಿ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿವರಗಳನ್ನು ನೀಡಿದ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ, ಶಾಸಕ ಡಾ.ಗುರುಪಾದಪ್ಪ ನಾಗಮಾರಪಳ್ಳಿ, ಇದೇ ಮೊದಲಿಗೆ ಬೀದರ್‌ನಲ್ಲಿ ಇಂಥ ಸಮ್ಮೇಳನ ನಡೆಯುತ್ತಿದೆ. ಮೊದಲ ದಿನ ಸಮ್ಮೇಳನಾ­ಧ್ಯಕ್ಷರ ಮೆರವಣಿಗೆ ನಡೆಯುತ್ತದೆ ಎಂದರು.ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಹಾರಕೂಡ ಮಠದ ಚನ್ನವೀರ ಶಿವಾಚಾರ್ಯ ಸಾನಿಧ್ಯದಲ್ಲಿ ವಹಿಸಲಿದ್ದು, ಉಸ್ತುವಾರಿ ಸಚಿವೆ ಉಮಾಶ್ರೀ ಉದ್ಘಾಟಿಸುವರು ಎಂದರು.ಸಮ್ಮೇಳನದ ನಿಮಿತ್ತ ಉ­ದ್ಘಾ­ಟನಾ ಸಮಾ­-ರಂಭದಲ್ಲಿ 25 ವಿವಿಧ ಕೃತಿಗಳು ಮತ್ತು ಸಿ.ಡಿ ಗಳನ್ನು ಬಿಡು­ಗಡೆ ಮಾಡ­ಲಾಗುತ್ತದೆ. ಚಿತ್ರಕಲಾ ಶಿಕ್ಷಕರ ಸಂಘ, ಯೋಗೇಶ್‌ ಚಿತ್ರಕಲಾ ವಿದ್ಯಾ­ಲಯದ ವಿದ್ಯಾರ್ಥಿ­ಗಳಿಂದ ಶರಣರ ಚಿತ್ರಕಲಾ ಪ್ರದ­ರ್ಶನ, ಪುಸ್ತಕ ಪ್ರದ­ರ್ಶನ ಕಾರ್ಯ­ಕ್ರಮ­ಗಳು ನಡೆಯಲಿವೆ ಎಂದರು.ಪ್ರಶಸ್ತಿ ಪುರಸ್ಕೃತರು: ಪ್ರಸಕ್ತ ಸಾಲಿನ ‘ಹಳಕಟ್ಟಿ ಶ್ರೀ’ ಪ್ರಶಸ್ತಿಗೆ ಉದ್ಯಮಿ ವಿಜಯ್‌ ಸಂಕೇಶ್ವರ, ಬೆಲ್ದಾಳ ಸಿದ್ಧರಾಮ ಶರಣರು, ಗುಲ್ಬರ್ಗ ಅಕ್ಕನ ಬಳಗದ ವಿಲಾಸವತಿ ಬೂಬಾ, ಬೆಳಗಾವಿಯ ಡಾ. ಗುರುದೇವಿ ಹುಲೆಪ್ಪನವರಮಠ ಅವರು ಪಾತ್ರರಾಗಿದ್ದಾರೆ.ಡಾ. ಫ.ಗು.ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್‌ ಮಹಾಲಿಂಗಪುರ ಮತ್ತು ನೀಲಮ್ಮನ ಬಳಗ ಮತ್ತು ಬಸವಪರ ಸಂಘಟನೆಗಳ ಜಂಟಿ ಸಹಭಾಗಿತ್ವದಲ್ಲಿ ಸಮ್ಮೇಳಣ ಆಯೋಜನೆಗೊಂಡಿದೆ.ಎರಡು ದಿನಕಾಲ ಸ್ವರಚಿತ ವಚನ ಗಾಯನ, ವಚನ ಸಾಹಿತ್ಯ ಮತ್ತು ಜಾಗತಿಕ ಸವಾಲು ಕುರಿತ ಗೋಷ್ಠಿಯೂ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಗುರುನಾಥ ಕೊಳ್ಳೂರ, ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಖದೀರ್, ಬಸವರಾಜ ಧನ್ನೂರ  ಇದ್ದರು.

ಪ್ರತಿಕ್ರಿಯಿಸಿ (+)