ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29ರಿಂದ ನೃತ್ಯ ಕಾರ್ಯಕ್ರಮ

Last Updated 23 ಏಪ್ರಿಲ್ 2013, 19:41 IST
ಅಕ್ಷರ ಗಾತ್ರ

ಬೆಂಗಳೂರು: `ಸೃಷ್ಟಿ ನೃತ್ಯ ಸಂಸ್ಥೆಯು ವಿಶ್ವ ನೃತ್ಯ ಸಪ್ತಾಹದ ಅಂಗವಾಗಿ ಏ. 29 ರಿಂದ ಮೇ 6 ರವರೆಗೆ ಏಳು ದಿನಗಳ ಕಾಲ 6 ವೇದಿಕೆಯಲ್ಲಿ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದೆ' ಎಂದು ಸೃಷ್ಟಿ ನೃತ್ಯ ಸಂಸ್ಥೆಯ ಅಧ್ಯಕ್ಷ ಎ.ವಿ.ಸತ್ಯನಾರಾಯಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಏಳು ದಿನಗಳ ಕಾರ್ಯಕ್ರಮದಲ್ಲಿ ದೇಶದ ಹಲವು ಭಾಗಗಳಿಂದ 55 ನೃತ್ಯ ತಂಡಗಳು ಆಗಮಿಸಲಿವೆ. ಕಥಕ್, ಕೂಚಿಪುಡಿ, ಒಡಿಶಿ ಮತ್ತು ಸಮಕಾಲೀನ ನೃತ್ಯಗಳನ್ನು ಪ್ರಸ್ತುತಪಡಿಸಲಿವೆ' ಎಂದರು.

`ರವೀಂದ್ರ ಕಲಾಕ್ಷೇತ್ರದಲ್ಲಿ ಏ. 29 ರಂದು ಕಾರ್ಯಕ್ರಮವನ್ನು ಕರ್ನಾಟಕ ಸಂಗೀತ  ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯಕ್ತ ಕೆ.ಆರ್.ರಾಮಕೃಷ್ಣ, ಬೆಂಗಳೂರು ದೂರದರ್ಶನ ಹೆಚ್ಚುವರಿ ನಿರ್ದೇಶಕ ಮಹೇಶ್ ಜೋಷಿ ಮತ್ತಿತರರು ಆಗಮಿಸಲಿದ್ದಾರೆ' ಎಂದರು.

`ಮೇ 6 ರಂದು ಚೌಡಯ್ಯ ಮೆಮೊರಿಯಲ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಲಾವಿದೆ ಸುಧಾ ಚಂದ್ರನ್ ಅವರು ನೃತ್ಯ ಪ್ರಸ್ತುತಪಡಿಸಲಿದ್ದು, ಅವರಿಗೆ ಸೃಷ್ಟಿ ರಾಷ್ಟ್ರೀಯ ನೃತ್ಯ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT