ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ ಸ್ಪೆಕ್ಟ್ರಂ ಹಗರಣ: ಫೆ. 22ರಂದು ಜೆಪಿಸಿಯಿಂದ ತನಿಖೆ ಘೋಷಣೆ

Last Updated 20 ಫೆಬ್ರುವರಿ 2011, 12:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ವಹಿಸುವ ಬಗ್ಗೆ ಸರ್ಕಾರ ಫೆಬ್ರುವರಿ 22ರಂದು ಸಂಸತ್ತಿನಲ್ಲಿ ಘೋಷಿಸುವ ಸಾಧ್ಯತೆ ಇದೆ.

ಭಾನುವಾರ ಇಲ್ಲಿ ನಡೆದ ವಿವಿಧ ಪಕ್ಷಗಳ ಮುಖಂಡರ ಸಭೆಯಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಈ ಕುರಿತು ಭರವಸೆ ನೀಡಿದ್ದಾರೆ.

’ಹಗರಣದ ತನಿಖೆಯನ್ನು ಜೆಪಿಸಿಯಿಂದ ಮಾಡಿಸುವ ಬಗ್ಗೆ ಈಗಾಗಲೇ ಸರ್ಕಾರ ಒಪ್ಪಿಕೊಂಡಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ’ ಎಂದು ಸಿಪಿಐ  ಮುಖಂಡ ಗುರುದಾಸ್ ದಾಸಗುಪ್ತಾ ಅವರು, ಜೆಪಿಸಿ ತನಿಖೆಗೆ ವಹಿಸುವ ಬಗ್ಗೆ ಫೆ. 22ರಂದು ಸರ್ಕಾರ ಘೋಷಿಸಲಿದೆಯೇ ಎನ್ನುವ ವರದಿಗಾರರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

ಇದೇ ರೀತಿ ಪ್ರತಿಕ್ರಿಯೆ ನೀಡಿರುವ ಇನ್ನೊರ್ವ ವಿರೋಧ ಪಕ್ಷದ ಮುಖಂಡರೊಬ್ಬರು ಜೆಪಿಸಿ ಕುರಿತು ಮಾಧ್ಯಮದವರ ಎದುರು ಮಾತನಾಡದಂತೆ ಪ್ರಣವ್ ಮುಖರ್ಜಿ ಕೋರಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT