ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಲೆಮಾರಿನ ನಿನಾದ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಉಸ್ತಾದ್ ಬಾಲೆಖಾನ್ ಮೆಮೊರಿಯಲ್ ಟ್ರಸ್ಟ್ ಮತ್ತು ಅಂತರಾ ಆರ್ಟಿಸ್ಟ್ ಕಲೆಕ್ಟಿವ್ ಸಹಯೋಗದಲ್ಲಿ ಮಹಾನ್ ಸಿತಾರ್ ವಾದಕ ದಿ. ನವಾಜ್ ಉಸ್ತಾದ್ ಬಾಲೆಖಾನ್ ಅವರ ಜನ್ಮದಿನ ಸ್ಮರಣೆ ಪ್ರಯುಕ್ತ ಶನಿವಾರ ವಾರ್ಷಿಕ ಸಂಗೀತ ಉತ್ಸವ.

ಸುಪ್ರಸಿದ್ಧ ಪಿಟೀಲು ವಾದಕಿಯಾದ ಡಾ. ಎನ್. ರಾಜಮ್ ಅವರು ಮಗಳು ಡಾ. ಸಂಗೀತಾ ಶಂಕರ ಮತ್ತು ಮೊಮ್ಮಕ್ಕಳಾದ ರಾಗಿಣಿ ಮತ್ತು ನಂದಿನಿ ಶಂಕರ ಅವರೊಂದಿಗೆ ಪಿಟೀಲು ಕಾರ್ಯಕ್ರಮ ನೀಡುವುದು ಈ ಸಲದ ಉತ್ಸವದ ವೈಶಿಷ್ಟ್ಯ. ಒಂದೇ ಕುಟುಂಬದ ಮೂರು ತಲೆಮಾರಿನ ಪಿಟೀಲು ವಾದಕಿಯರು ಒಂದೇ ವೇದಿಕೆಯಲ್ಲಿ ಪ್ರದರ್ಶನ ನೀಡುವ ಈ ಅಪರೂಪದ ಕಾರ್ಯಕ್ರಮದಲ್ಲಿ ಪಂಡಿತ್ ವಿಶ್ವನಾಥ ನಾಕೋಡ ತಬಲಾ ಸಾಥ್ ನೀಡಲಿದ್ದಾರೆ.

ರಶ್ಮಿರಾಜ ಭುವನೇಶ್ವರ ಅವರ ಓಡಿಸ್ಸಿ ನೃತ್ಯದೊಂದಿಗೆ ಸಂಜೆಯ ಕಾರ್ಯಕ್ರಮ ಆರಂಭ. ಗಾಯನ: ಬಿನೋದ ಪಾಂಡಾ. ಮರ್ದಲಾ: ಬುದ್ಧನಾಥ ಸ್ವಾಯನ್. ಕೊಳಲು: ಸೌಮ್ಯ ಜೋಷಿ. ಪಿಟೀಲು: ಸಂದೀಪ ಕುಂದಾ.
 

ಬಾಲೆಖಾನ್ ನೆನಪು
2007ರಲ್ಲಿ ಉಸ್ತಾದ ಬಾಲೆಖಾನರ ಅಕಾಲಿಕ ನಿಧನದ ನಂತರ ಅವರ ಪುತ್ರರು ಬಾಲೆಖಾನರ ನೆನಪು, ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಕಿರಿಯ ಪುತ್ರ ಹಫೀಜ ಖಾನ್ ಹಾಗೂ ಪುಣೆಯಲ್ಲಿ ವಾಸವಾಗಿರುವ ಹಿರಿಯ ಸಹೋದರ ರಯಿಸ ಖಾನ್ ಸೇರಿ 2 ವರ್ಷದ ಹಿಂದೆ ಹುಟ್ಟುಹಾಕಿದ ಉಸ್ತಾದ ಬಾಲೇಖಾನ್ ಮೆಮೊರಿಯಲ್ ಟ್ರಸ್ಟ್ ಸಂಗೀತ ಕಾರ್ಯಕ್ರಮಗಳ ಮೂಲಕ ಅವರ ನೆನಪು ಚಿರಸ್ಥಾಯಿಯಾಗಿ ಇಡುತ್ತಿದೆ.


ಸಂಗೀತ ಜಗತ್ತಿನಲ್ಲಿ ಬಹು ಮನ್ನಣೆ ಪಡೆ ದಿರುವ ಪಿಟೀಲು ವಾದಕಿ ಡಾ. ಎನ್. ರಾಜಮ್ ಬಹು ದೊಡ್ಡ ಕಲಾವಿದೆ. ಪಿಟೀಲು ವಾದನದಲ್ಲಿ ಗಾಯಕಿ ಅಂಗದ ಪರಿಣತಿ ಅವರದ್ದು. ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಗೌರವಗಳಿಗೆ ಪಾತ್ರರಾಗಿದ್ದಾರೆ.  ರಾಜಮ್ ಅವರ ಪುತ್ರಿ ಸಂಗೀತಾ ಕೂಡ ಬಹು ಪ್ರತಿಭಾನ್ವಿತ ಪಿಟೀಲು ವಾದಕಿ. ತಾಯಿಯ ಗರಡಿಯಲ್ಲಿ ಪಳಗಿದ್ದು, ದೇಶ ವಿದೇಶಗಳಲ್ಲಿ ಕಲಾತ್ಮಕ ಪಿಟೀಲು ವಾದನದಿಂದ ಖ್ಯಾತಿ ಪಡೆದಿದ್ದಾರೆ. ರಾಗಿಣಿ ಮತ್ತು ನಂದಿನಿ ಕೂಡ ತಾಯಿ ಮತ್ತು ಅಜ್ಜಿಯಿಂದ ಸಂಗೀತವನ್ನು ಬಳುವಳಿಯಾಗಿ ಪಡೆದು ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಪ್ರತಿಭಾವಂತರು. 

ಸ್ಥಳ: ಜೆಎಸ್‌ಎಸ್ ಸಭಾಂಗಣ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ. ಸಂಜೆ 5.30. ದೇಣಿಗೆ ಪಾಸ್ ಸಭಾಂಗಣದ ಹೊರಗೆ ಲಭ್ಯ. ವಿವರಕ್ಕೆ: 9632033600, 9886155663.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT