ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

37 ವರ್ಷ ಸಂಸತ್ ಪಟುವಾಗಿದ್ದ ಇಂದ್ರಜಿತ್ ಗುಪ್ತಾ

Last Updated 28 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಹನ್ನೊಂದು ಸಲ ಲೋಕಸಭೆಗೆ ಆಯ್ಕೆಯಾಗಿದ್ದ ಇಂದ್ರಜಿತ್ ಗುಪ್ತಾ (1919–2001) ಅವರು ಕಮ್ಯುನಿಸ್ಟ್ ಪಕ್ಷದ (ಸಿಪಿಐ) ನಿಷ್ಠಾವಂತ ಸದಸ್ಯರಾಗಿ ಕೊನೆ ತನಕ ಉಳಿದವರು. ಮೊದಲ ಸಲ 1960ರಲ್ಲಿ ಸಂಸತ್ ಪ್ರವೇಶಿಸಿದ ಅವರು 6ನೇ ಲೋಕ­ಸಭೆ (1977ರಿಂದ 1980) ಬಿಟ್ಟರೆ ಉಳಿ­ದಂತೆ ಸತತವಾಗಿ 2 ರಿಂದ 13ರ ವರೆಗೆ ಎಲ್ಲ ಲೋಕ­ಸಭೆಗಳ ಸದಸ್ಯರಾಗಿದ್ದರು. 37 ವರ್ಷ ಸಂಸದರಾಗಿ ಸೇವೆ ಸಲ್ಲಿಸಿ ದಾಖಲೆ ಸೃಷ್ಟಿಸಿದರು.  

ಹಿರಿಯ ಸದಸ್ಯರಾದ ಕಾರಣ   1996,1998,1999ರಲ್ಲಿ  ಹಂಗಾಮಿ ಸ್ಪೀಕರ್ ಆಗಿ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಗೌರವ ಅವರಿಗೆ ಬಂದಿತ್ತು.

ದೀರ್ಘ ಕಾಲ ವಿರೋಧ ಪಕ್ಷದಲ್ಲಿದ್ದ ಗುಪ್ತಾ ಅವರು ನೇರ–ಖಾರ ನುಡಿಗೆ ಹೆಸರುವಾಸಿ. ಅವರ ತರ್ಕಬದ್ಧ ಮಾತುಗಳು ಸಂಸತ್ತಿ­ನಲ್ಲಿ ಅನೇಕರ ಗಮನ ಸೆಳೆ-­ಯು­ವಂತಿರು­ತ್ತಿತ್ತು. ಸಂಯುಕ್ತ ರಂಗ  ಸರ್ಕಾರದಲ್ಲಿ ಕೇಂದ್ರ  ಗೃಹಮಂತ್ರಿ­ಯಾಗಿದ್ದರು.  ಸರ್ಕಾರ­ವನ್ನು ತಮ್ಮ ನೇರ ಪ್ರಶ್ನೆಗಳಿಂದ ಮುಜುಗರ­ಗೊಳಿಸುತ್ತಿದ್ದರು. ದೊಡ್ಡ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದುದು ಅವರ ವಿಶೇಷತೆ. ಕೇಂದ್ರ ಗೃಹಮಂತ್ರಿ­ಯಂಥ ಮಹತ್ವದ ಹುದ್ದೆಗೆ ಏರಿದ ಮೊದಲ ಕಮ್ಯುನಿಸ್ಟ್ ಎಂಬ ಹೆಗ್ಗಳಿಕೆ ಅವರದು (1996–98).

ಉದ್ದಕ್ಕೂ ಸರಳ ಜೀವನ ನಡೆಸಿದ ಅವರು ಎರಡು ಕೊಠಡಿಯಿರುವ ಮನೆ­ಯಲ್ಲಿ ವಾಸವಾಗಿದ್ದರು ಮತ್ತು ಗೃಹಮಂತ್ರಿಯಾದ ಮೇಲೂ ಅದೇ ಮನೆಯಲ್­ಲಿದ್ದರು. ಕೇಂದ್ರದಲ್ಲಿ ಮಂತ್ರಿ­ಯಾಗುವವರೆಗೂ ನಡೆದೇ ಸಂಸತ್ತಿಗೆ ಬರುತ್ತಿದ್ದರು.

ಅವರು ಕೇಂದ್ರ ಗೃಹ ಮಂತ್ರಿಯಾಗಿದ್ದಾಗ ವಿಮಾನದಲ್ಲಿ ಬಂದರೆ ಅವರನ್ನು ಕರೆದೊಯ್ಯಲು ಕಾರು ವಿಮಾನ ನಿಲ್ದಾಣದ ರನ್‌ವೇ ಸಮೀಪದ ಪಥಕ್ಕೆ ಹೋಗುತ್ತಿರಲಿಲ್ಲ. ಬದಲಿಗೆ ಅವರು ನಿಲ್ದಾಣದ ಬಸ್ಸನ್ನು ಬಳಸಿ ಹೊರಕ್ಕೆ ಬರುತ್ತಿದ್ದರು. ಸಂಸದರು ಸಾಮಾನ್ಯರಂತೆ ಬದುಕಬೇಕು ಎಂದು  ನಂಬಿ ಅಂತೆಯೇ ನಡೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT