ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ತಲೆಬುರುಡೆ, ಅಸ್ಥಿಪಂಜರ ಪತ್ತೆ

Last Updated 12 ಜೂನ್ 2011, 11:20 IST
ಅಕ್ಷರ ಗಾತ್ರ

ಮಂಗಳೂರು: ನಗರದ ಜೆಪ್ಪು ಮೋರ್ಗನ್ಸ್‌ಗೇಟ್ ಬಳಿ ಕಸದತೊಟ್ಟಿ ಪಕ್ಕದಲ್ಲೇ ಮಾನವರ ನಾಲ್ಕು ತಲೆ ಬುರುಡೆ ಹಾಗೂ ಅಸ್ಥಿಪಂಜರ ಶನಿವಾರ ರಾತ್ರಿ ಪತ್ತೆಯಾಗಿದೆ.

ವಿವರ: ಮೋರ್ಗನ್ಸ್‌ಗೇಟ್‌ನಿಂದ ಎಂಫಸಿಸ್ ರಸ್ತೆ ಪಕ್ಕದ ಕಸದ ತೊಟ್ಟಿಯ ಬಳಿ ನಾಯಿಗಳು ಮೂಳೆ ಎಳೆದಾಡುತ್ತಿರುವುದು ಆಟವಾಡುತ್ತಿದ್ದ ಮಕ್ಕಳ ಗಮನಕ್ಕೆ ಬಂತು. ಅಲ್ಲಿ ಮನುಷ್ಯನ ತಲೆ ಬುರುಡೆ ಇರುವುದನ್ನು ಕಂಡು ಹೆದರಿದ ಮಕ್ಕಳು, ವಿಷಯವನ್ನು ಮನೆಯವರ ಗಮನಕ್ಕೆ ತಂದಿದ್ದರು.
 
ರಾತ್ರಿ ಸುಮಾರು 7.30ಕ್ಕೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ನಾಲ್ಕು ತಲೆ ಬುರುಡೆ ಹಾಗೂ ಮನುಷ್ಯದ ದೇಹದ ಮೂಳೆಗಳ ರಾಶಿ ಇರುವುದು ಕಂಡು ಬಂತು. ಅವುಗಳನ್ನು ಒಟ್ಟುಗೂಡಿಸಿ ಗೋಣಿ ಚೀಲದಲ್ಲಿ ತುಂಬಿ ವೆನ್ಲಾಕ್‌ನ ಶವಾಗಾರಕ್ಕೆ ಸಾಗಿಸಿದರು.

ಅಸ್ಥಿ ಪಂಜರ ಪತ್ತೆಯಾದ ಸುದ್ದಿ ಹರಡುತ್ತಿದ್ದಂತೆ ಧಾರಾಕಾರ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಜನ ಸ್ಥಳದಲ್ಲಿ  ಸೇರಿದ್ದರು. ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ನಾಲ್ಕು ತಲೆ ಬುರುಡೆ ಪತ್ತೆಯಾಗಿರುವುದು ಸ್ಥಳೀಯರ ಆತಂಕಕ್ಕೂ ಕಾರಣವಾಗಿತ್ತು.

ವೈದ್ಯಕೀಯ ವಿದ್ಯಾರ್ಥಿಗಳ ಕೃತ್ಯ?: ಅಧ್ಯಯನ ಸಲುವಾಗಿ ಮಾನವನ ಅಸ್ಥಿ ಪಂಜರವನ್ನು ಇಟ್ಟುಕೊಳ್ಳುವ ವಿದ್ಯಾರ್ಥಿಗಳು ಅದನ್ನು ಕಸದ ಬುಟ್ಟಿ ಪಕ್ಕ ಬಿಸಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತಲೆ ಬುರುಡೆಗಳಲ್ಲಿ ಮರಣೋತ್ತರ ಪರೀಕ್ಷೆ ವೇಳೆ ಉಂಟಾಗುವ ಹೊಲಿಗೆ ಗುರುತುಗಳಿರುವುದು ಇದಕ್ಕೆ ಪುಷ್ಟಿ ನೀಡಿವೆ. ಮೂಳೆ 18 ವರ್ಷ ಹಳೆಯದಿರಬಹುದು ಎನ್ನಲಾಗಿದೆ. ವೈದ್ಯರು ಪರಿಶೀಲನೆ ನಡೆಸಿದ ಬಳಿಕ `ಮೂಳೆ ರಹಸ್ಯ~ ಬಯಲಾಗಲಿದೆ.

ಪಾಂಡೇಶ್ವರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ತಿಲಕಚಂದ್ರ, ಎಸ್.ಐ. ಭಾರತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT