ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

400 ರೈತರಿಗೆ 4 ಕೋಟಿ ಸಾಲ ವಿತರಣೆ

Last Updated 12 ಸೆಪ್ಟೆಂಬರ್ 2011, 7:50 IST
ಅಕ್ಷರ ಗಾತ್ರ

ರಾಯಬಾಗ: ಅಗತ್ಯವಿರುವ ಎಲ್ಲ ರೈತರಿಗೂ ಸಾಲ ಸೌಲಭ್ಯ ಒದಗಿಸಲು ಸೆಪ್ಟೆಂಬರ್ 30ರವರೆಗೆ ಸಾಲ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ವಲಯ ಉಪಪ್ರಬಂಧಕ ಸಿದ್ದಲಿಂಗಪ್ಪ ಹೇಳಿದರು.

ಇಲ್ಲಿನ ಸಿಂಡಿಕೇಟ್ ಬ್ಯಾಂಕಿನ ಆವರಣದಲ್ಲಿ ತಾಲ್ಲೂಕಿನ 200 ರೈ ಬೆಳೆಸಾಲ ವಿತರಣೆ ಮಾಡಿ ಅವರು ಮಾತನಾಡಿದರು.

400  ರೈತರಿಗೆ ಒಟ್ಟು ರೂ. 4 ಕೋಟಿ ಬೆಳೆಸಾಲ ಮಂಜೂರು ಮಾಡಲಾಗಿದೆ. ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿಸಬೇಕು ಎಂದು ಸಲಹೆ ನೀಡಿದರು.

ಗ್ರಾಹಕರಿಗೆ ಇನ್ನು ಹೆಚ್ಚಿನ ಸೇವೆ ಒದಗಿಸುವ ದಿಸೆಯಲ್ಲಿ ಶೀಘ್ರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳ ಲಾಗುವುದು ಎಂದು ಅವರು ತಿಸಿದರು.

ಬ್ಯಾಂಕಿನ ಗ್ರಾಮೀಣಾಭಿವೃದ್ಧಿ ಅಧಿಕಾರಿಬಸಪ್ಪ ಮುಧೋಳ ಮಾತನಾಡಿ, ಬೆಳೆಸಾಲದ ಅಭಿಯಾನ ಯೋಜನೆಯ ಉದ್ದೇಶ ವಿವರಿಸಿದರು.

 ಗ್ರಾಹಕರ ಪರವಾಗಿ ಮಾತನಾಡಿ, ಬೆಕ್ಕೇರಿಯ ಬಸಪ್ಪ ನಾಗೌಡ ಮಾತನಾಡಿ,  ಸಿಂಡಿಕೇಟ್ ಬ್ಯಾಂಕಿನಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ರೈತರು ಬೇರೆ ಕಡೆ ಹೋಗುವಂತಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಅಣ್ಣಾಸಾಬ ಕೋನೆ, ರಾಜು ಗುಳ್ಳನ್ನವರ, ರಮೇಶ ಕುಲಕರ್ಣಿ ಮಾತನಾಡಿ,  ರೈತರಿಗಾಗಿ ಬೇರೆ ಕೌಂಟರ್ ತೆರೆಯಬೇಕು ಹಾಗೂ ಬ್ಯಾಂಕಿಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಮನವಿ ಮಾಡಿದರು.

ಬ್ಯಾಂಕಿನ ಹಿರಿಯ ಶಾಖಾಧಿಕಾರಿ ರಮೇಶ ಸಿರಸಟ್, ಸೂರ್ಯಕಾಂತ ಗಂಗಾ, ಕೃಷಿ ಅಧಿಕಾರಿ ಆರ್.ಕೆ. ಹೋಳಕರ, ಪ್ರಾದೇಶಿಕ ವ್ಯವಸ್ಥಾಪಕ ಸುಧೀರ ಕವಲಗುಡ್ಡ, ಹಿರಿಯ ಪ್ರಬಂಧಕ ಏಕಾಂತಪ್ಪ,ಸದಾಶಿವ ದೇಶಿಂಗೆ, ಅಣ್ಣಾಸಾಬ ಕೋನೆ,ರಮೇಶ ಕುಲಕರ್ಣಿ ಹಾಗೂ ತಾಲ್ಲೂಕಿನ ರೈತರು, ಬ್ಯಾಂಕಿನ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಅತೀ ಹೆಚ್ಚು ಪಿಗ್ಮಿ ಸಂಗ್ರಹಕಾರ ಹಿರೇಮಠ ಅವರನ್ನು ಸತ್ಕರಿಸಲಾಯಿತು.
ಬಸಪ್ಪ ಮುಧೋಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ರಾಘವೇಂದ್ರ  ನಾಯ್ಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT