ಸೋಮವಾರ, ಜನವರಿ 27, 2020
27 °C
ಮುಂಬೈ ರಣಜಿ ತಂಡಕ್ಕೆ ಪ್ರವೀಣ್ ತಾಂಬೆ ಆಯ್ಕೆ

42ರ ಹರೆಯದಲ್ಲಿ ರಣಜಿಗೆ ಪದಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ) : ಆಟಕ್ಕೆ ಪ್ರತಿಭೆ ಮುಖ್ಯವೇ ಹೊರತು ವಯಸ್ಸಲ್ಲ... ಮುಂಬೈ ಮೂಲದ 42ರ ಹರೆಯದ ಪ್ರವೀಣ್ ತಾಂಬೆ ಅವರನ್ನು ರಣಜಿ ತಂಡಕ್ಕೆ ಆಯ್ಕೆ ಮಾಡಿರುವುದೇ ಇದಕ್ಕೆ ಸಾಕ್ಷಿ. 

ಅಚ್ಚರಿ ಎನಿಸುವಂತೆ 42 ವರ್ಷದ ಮುಂಬೈ ಮೂಲದ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ ಅವರು ಮುಂಬೈ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ 6ರಿಂದ ವಾಂಖೆಡೆ ಕ್ರೀಡಾಂಗಣದಲ್ಲಿ ಜಾರ್ಖಂಡ್ ವಿರುದ್ಧ ನಡೆಯಲಿರುವ 4 ದಿನಗಳ ಗ್ರೂಪ್ 'ಎ' ಪಂದ್ಯದಲ್ಲಿ ಅವರು ತಮ್ಮ ಚೊಚ್ಚಲ ರಣಜಿ ಪಂದ್ಯವನ್ನು ಆಡಲಿದ್ದಾರೆ. 

ಮುಂಬೈ ತಂಡದಲ್ಲಿ ಅನುಭವಿ ಸ್ಪಿನ್ನರ್ ಕೊರತೆ ಇರುವದರಿಂದ ಮತ್ತು ಕಳೆದ ಐಪಿಎಲ್ ಆವೃತ್ತಿಯಲ್ಲಿ ರಾಜಸ್ತಾನ ತಂಡದ ಪರ ತಾಂಬೆ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ತಾಂಬೆ ಅವರಿಗೆ ತಂಡದಲ್ಲಿ ಸ್ಥಾನ ದೊರೆತಿದೆ.

ಇನ್ನು ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ವೇಗಿ ಜಹೀರ್ ಖಾನ್ ಆಯ್ಕೆಯಾಗಿದ್ದು, ಈ ಕಾರಣಕ್ಕೆ ಅವರ ಜಾಗದಲ್ಲಿ ಕ್ಷೇಮಲ್ ವೆಂಗನ್ಕರ್ ಆಡಲಿದ್ದಾರೆ.

ಜಹೀರ್ ಖಾನ್ ಅನುಪಸ್ಥಿತಿಯಲ್ಲಿ ಆಲ್ ರೌಂಡರ್ ಅಭಿಷೇಕ್ ನಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ.

 

 

ಪ್ರತಿಕ್ರಿಯಿಸಿ (+)