ಮಂಗಳವಾರ, ಮೇ 11, 2021
25 °C

45 ಮಂದಿಗೆ ವೈದ್ಯಕೀಯ ಸಹಾಯಧನ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೀಣ್ಯ ದಾಸರಹಳ್ಳಿ:  ತಮ್ಮ ಅನುದಾನದಡಿ 45 ಮಂದಿ ಫಲಾನುಭವಿಗಳಿಗೆ ವೈದ್ಯಕೀಯ ಸಹಾಯಧನದ ಚೆಕ್, ಸಮಾಜ ಕಲ್ಯಾಣ ಇಲಾಖೆಯಿಂದ ಸವಿತಾ ಸಮಾಜದವರಿಗೆ ಶೇವಿಂಗ್ ಕಿಟ್, ಮಡಿವಾಳ ಜನಾಂಗದವರಿಗೆ ಐರನ್ ಬಾಕ್ಸ್, ಬಡವರಿಗೆ ತಳ್ಳುವ ಗಾಡಿಯನ್ನು ಮೇಯರ್ ಪಿ. ಶಾರದಮ್ಮ ಶನಿವಾರ ಕಮ್ಮಗೊಂಡನಳ್ಳಿಯಲ್ಲಿ ವಿತರಿಸಿದರು.ಆನಂತರ ಮಾತನಾಡಿದ ಅವರು, ಪಾಲಿಕೆಯಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಸಾರ್ವಜನಿಕರು ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗಬಾರದು ಎಂದು ಕಿವಿಮಾತು ಹೇಳಿದರು.ಶಾಸಕ ಎಸ್.ಮುನಿರಾಜು  ಮಾತನಾಡಿ, ಸರ್ಕಾರಿ ಸವಲತ್ತುಗಳನ್ನು ಪಡೆದುಕೊಂಡವರು ಸ್ವಾವಲಂಬಿ ಬದುಕನ್ನು ನಡೆಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು. ಪಾಲಿಕೆ ಸದಸ್ಯರಾದ ಶಶಿ ಶಿವಕುಮಾರ್, ಪುಟ್ಟಮ್ಮ ತಮ್ಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕಬೈಲಪ್ಪ, ಜಂಟಿ ಆಯುಕ್ತ ರಾಧಾಕೃಷ್ಣ, ಅಧಿಕಾರಿಗಳಾದ ಮೋಹನ್‌ದಾಸ್ ಚಂದ್ರಶೇಖರ್, ರವಿ, ವೆಂಕಟರಾಯಪ್ಪ, ಮುಖಂಡರಾದ ರಾಮಾಂಜಿನಪ್ಪ, ಶೆಟ್ಟಳ್ಳಿ ಸುರೇಶ್, ಗಂಗರಾಜು ಕೆ.ಸಿ.ವೆಂಕಟೇಶ್, ಕೆ.ವಿ.ನಾರಾಯಣಸ್ವಾಮಿ, ಸೋಮಶೇಖರ್ ಮತ್ತಿತರರು ಹಾಜರಿದ್ದರು.

ಬ್ರೈಲ್  ಲಿಪಿಯಲ್ಲಿರುವ ಪದವಿ ಪಠ್ಯಪುಸ್ತಕ ಪಡೆಯಲು ಸೂಚನೆ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳು ಬ್ರೈಲ್  ಲಿಪಿಯಲ್ಲಿರುವ ಪದವಿ ಪಠ್ಯಪುಸ್ತಕಗಳು ಹಾಗೂ ಆಡಿಯೊ ಕ್ಯಾಸೆಟ್‌ಗಳನ್ನು ಪಡೆದುಕೊಳ್ಳವಂತೆ ತಿಳಿಸಿದೆ.ಇದೇ 24 ರಂದು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಠ್ಯ ಪುಸ್ತಕಗಳನ್ನು ವಿತರಿಸಲಾಗುತ್ತದೆ.ವಿಶ್ವವಿದ್ಯಾಲಯ ವ್ಯಾಪ್ತಿಯ ಅಭ್ಯರ್ಥಿಗಳು ತಮ್ಮ ಸ್ವವಿವರಗಳನ್ನು ಈ ವಿಳಾಸಕ್ಕೆ ಸಲ್ಲಿಸುವಂತೆ ಕೋರಿದೆ.

ಸಂಪರ್ಕ ವಿಳಾಸ: ಪ್ರೊ.ಪ್ರಸನ್ನ ಉಡಿಪಿಕರ್, ಇಂಗ್ಲಿಷ್ ವಿಭಾಗ, ವಿ.ವಿ.ಎನ್ ಪದವಿ ಕಾಲೇಜು, ವಾಣಿವಿಲಾಸ ರಸ್ತೆ. ಆಂಥೋಣಿ ದೇವರಾಜ್, ಸಮನ್ವಯಾಧಿಕಾರಿ, ಓ.ಎಸ್.ಡಿ, ಬೆಂಗಳೂರು ವಿಶ್ವವಿದ್ಯಾಲಯ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.