ಮಂಗಳವಾರ, ಮೇ 18, 2021
31 °C
ರಸಗೊಬ್ಬರಗಳ ಧಾರಣೆ ಕಡಿಮೆ, ಪರಿಷ್ಕೃತ ದರದಲ್ಲಿ ಖರೀದಿಸಿ

45 ಸಾವಿರ ಹೆಕ್ಟೇರ್ ಬತ್ತ ಬಿತ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉಡುಪಿ ಜಿಲ್ಲೆಯಲ್ಲಿ 2013-14ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 45ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಬೆಳೆ ಬೆಳೆಯಲು ಗುರಿ ಹೊಂದಾಗಿದೆ. ಉಡುಪಿ ತಾಲ್ಲೂಕಿನಲ್ಲಿ 18,500 ಹೆಕ್ಟೇರ್, ಕುಂದಾಪುರ ತಾಲ್ಲೂಕಿನಲ್ಲಿ 18ಸಾವಿರ ಹೆಕ್ಟೇರ್ ಹಾಗೂ ಕಾರ್ಕಳ ತಾಲ್ಲೂಕಿನಲ್ಲಿ 8500 ಹೆಕ್ಟೆರ್ ಬಿತ್ತನೆ ಗುರಿ ಇದೆ.ಜಿಲ್ಲೆಯ ಸರಾಸರಿ ವಾಡಿಕೆ ಮಳೆ 4182 ಮಿ.ಮೀ. ಜೂನ್ ಅಂತ್ಯದವರೆಗಿನ ವಾಡಿಕೆ ಮಳೆ 1272.70 ಮಿ.ಮೀ ಇದ್ದು, ಈವರೆಗೆ 849.40 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಎಂ.ಓ.4 ತಳಿಯ ಬತ್ತದ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಒಟ್ಟಾರೆಯಾಗಿ 2060 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, 1825 ಕ್ವಿಂಟಾಲ್ ಎಂ.ಓ.4 ಬತ್ತದ ಬಿತ್ತನೆ ಬೀಜ ಜಿಲ್ಲೆಯ 9 ರೈತ ಸಂಪರ್ಕ ಕೇಂದ್ರಗಳಲ್ಲಿ ಒಟ್ಟಾರೆಯಾಗಿ ದಾಸ್ತಾನಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈವರೆಗೆ 3873 ಮಂದಿ ರೈತರಿಗೆ 1613.04 ಕ್ವಿಂಟಾಲ್ ಬಿತ್ತನೆ ಬೀಜ ಸಹಾಯ ಧನದಲ್ಲಿ ವಿತರಿಸಲಾಗಿದೆ. ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ ರೂ.7 ಸಹಾಯಧನ ಲಭ್ಯವಿದ್ದು, ರೈತರು ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ.ಜಿಲ್ಲೆಯ ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದ್ದು, ಪ್ರಸ್ತುತ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ಕುಂದಾಪುರ ಶಾಖೆ, ಸಹಕಾರಿ ಹಾಗೂ ಖಾಸಗಿ ಮಾರಾಟ ಮಳಿಗೆಗಳಲ್ಲಿ 1810 ಮೆಟ್ರಿಕ್ ಟನ್‌ನಷ್ಟು ವಿವಿಧ ರಸಗೊಬ್ಬರಗ ದಾಸ್ತಾನಿದೆ ಎಂದು ಅವರು ತಿಳಿಸಿದ್ದಾರೆ.ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ಜಿಂಕ್ ಸಲ್ಫೇಟ್, ಬೋರಾಕ್ಸ್, ಸುಣ್ಣ, ಸಾವಯವ ಗೊಬ್ಬರಗಳು ಲಬ್ಯವಿದ್ದು, ಸಂಬಂಧಿತ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಸಹಾಯಧನದಲ್ಲಿ ಪಡೆಯಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ರೈತರಿಗೆ ಸಲಹೆ: ರಸಗೊಬ್ಬರಗಳ ಧಾರಣೆಯು 2013ರ ಏಪ್ರಿಲ್ 1ರಿಂದ ಕಡಿಮೆಯಾಗಿದ್ದು, ರೈತರು ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಖರೀದಿ ಮಾಡುವಾಗ ಪರಿಷ್ಕೃತ ದರದಲ್ಲಿ ರಸಗೊಬ್ಬರವನ್ನು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.ರೈತರು ಸ್ವಂತ ಬಿತ್ತನೆ ಬೀಜ ಬಿತ್ತನೆಗೆ ಉಪಯೋಗಿಸುವ ಮೊದಲು 1 ಕೆ.ಜಿ ಉಪ್ಪು ಹಾಗೂ 4 ಲೀ ನೀರಿನ ಪ್ರಮಾಣದ ದ್ರಾವಣ ತಯಾರಿಸಿ, ಅದರಲ್ಲಿ ಬಿತ್ತನೆ ಬೀಜವನ್ನು ಅದ್ದಿ, ತರುವಾಯ ಶುದ್ಧ ನೀರಿನಿಂದ ತೊಳೆಯಬೇಕು.ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿದ ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ 1 ಗ್ರಾಂ ಕಾರ್ಬನ್ ಡೈಜಿಮ್ ಪೀಡೆನಾಶಕದಿಂದ ಉಪಚರಿಸಿ ಬಿತ್ತನೆಗೆ ಉಪಯೋಗಿಸಬೇಕು. ರೈತರು ಸಕಾಲದಲ್ಲಿ ನಾಟಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.ಉತ್ತಮ ತಾಂತ್ರಿಕತೆಗಳಾದ ಶ್ರೀ ಪದ್ಧತಿಯಲ್ಲಿ ಬತ್ತದ ಬೇಸಾಯ, ಯಾಂತ್ರೀಕೃತ ಬತ್ತದ ನಾಟಿ ಪದ್ಧತಿ ಕ್ರಮಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಲು ಆದ್ಯತೆ ನೀಡಬೇಕು.ಹೆಚ್ಚಿನ ಮಾಹಿತಿಗಾಗಿ ಸಮೀಪದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಿ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.