5 ಕೆ.ಜಿ. ಚಿನ್ನಾಭರಣ ವಶ

7

5 ಕೆ.ಜಿ. ಚಿನ್ನಾಭರಣ ವಶ

Published:
Updated:

ಬೆಳಗಾವಿ: ಬೆಳಗಾವಿಯಿಂದ ಮುಂಬೈಗೆ ವಿಮಾನದಲ್ಲಿ ಅನಧಿಕೃತವಾಗಿ ಸಾಗಾಟವಾಗುತ್ತಿದ್ದ 1.35 ಕೋಟಿ ರೂ ಬೆಲೆಯ 5 ಕೆ.ಜಿ. ಚಿನ್ನ ವಶಪಡಿಸಿಕೊಂಡು, ಒಬ್ಬನನ್ನು ವಶಕ್ಕೆ ತೆಗೆದುಕೊಂಡ ಘಟನೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.ಮುಂಬೈನ ಮುಖೇಶ ಸೋಲಂಕಿ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ನಿಲ್ದಾಣದ ಭದ್ರತಾ ಅಧಿಕಾರಿಗಳು ಸೋಲಂಕಿ ಅವರ ಬ್ಯಾಗ್ ತಪಾಸಣೆ ನಡೆಸಿದಾಗ 5 ಕೆ.ಜಿ. ಚಿನ್ನಾಭರಣಗಳು ಪತ್ತೆಯಾದವು.ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡದ ಹಾಗೂ ಅಧಿಕೃತ ದಾಖಲೆಗಳನ್ನು ನೀಡದ ಕಾರಣ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.ಆರೋಪಿಯು ಚಿನ್ನದ ಆಭರಣಗಳನ್ನು ಎಲ್ಲಿಂದ ತಂದಿದ್ದಾನೆ. ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದ. ಅವುಗಳು ಯಾರಿಗೆ ಸೇರಿವೆ ಎಂಬ ಬಗೆಗೆ ತನಿಖೆ ಆರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry