ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ಕೋಟಿ ಮಾನಸಿಕ ಅಸ್ವಸ್ಥರು

Last Updated 21 ಅಕ್ಟೋಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: `ನಿಮ್ಹಾನ್ಸ್ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಮೀಕ್ಷೆಗಳ ಪ್ರಕಾರ ದೇಶದಲ್ಲಿ 6ರಿಂದ 7 ಕೋಟಿ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ~ ಎಂದು ಮಾನಸಿಕ- ಸಾಮಾಜಿಕ ಪುನರ್‌ವಸತಿ ಕೇಂದ್ರ `ಕಡಬಮ್ಸ~ ಸಂಸ್ಥೆ ನಿರ್ದೇಶಕ ಸಂದೇಶ್ ಆರ್.ಕಡಬಮ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಒಂದು ಲಕ್ಷ ಜನಸಂಖ್ಯೆಗೆ ಕನಿಷ್ಠ ಒಬ್ಬ ಮನೋವೈದ್ಯರಾದರೂ ಇರಬೇಕು. ಈ ಪ್ರಕಾರ ದೇಶಕ್ಕೆ 13 ಸಾವಿರಕ್ಕೂ ಹೆಚ್ಚು ಮನೋವೈದ್ಯರ ಅಗತ್ಯವಿದೆ. ಆದರೆ ಇರುವ ಮನೋವೈದ್ಯರ ಸಂಖ್ಯೆ 3 ಸಾವಿರ ಮಾತ್ರ~ ಎಂದರು.

`ಜನಸಂಖ್ಯೆ ದೃಷ್ಟಿಯಿಂದ ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಮನೋವೈದ್ಯರ ಅಗತ್ಯವಿದೆ. ಆದರೆ ಇಲ್ಲಿರುವುದು 200 ಮನೋವೈದ್ಯರು ಮಾತ್ರ. ಮಾನಸಿಕ ಆರೋಗ್ಯ ಸುಧಾರಣೆಗೆ ಕೇಂದ್ರ ಸರ್ಕಾರ ಶೇ 2ಕ್ಕಿಂತ ಕಡಿಮೆ ಹಣ ನೀಡುತ್ತಿದೆ. ಇದು ಏನೇನು ಸಾಲದು~ ಎಂದರು.

ಸಂಸ್ಥೆಯ ಉಪಾಧ್ಯಕ್ಷೆ ಎಂ.ಕೆ.ಸರಸ್ವತಿ, ಕಾರ್ಯನಿರ್ವಹಣಾ ವಿಭಾಗದ ನಿರ್ದೇಶಕ ರಾಜಶೇಖರ್ ಹಿರೇಮಠ್, ನಿರ್ದೇಶಕ ಡಾ.ಸುನಿಲ್ ಮೊದಲಾದವರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT