ಮಂಗಳವಾರ, ಜೂನ್ 22, 2021
24 °C

70 ಕೋಟಿ ಮತಕ್ಕೆ ಕಾಂಗ್ರೆಸ್‌ ರಣತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಡತನ ರೇಖೆಗಿಂತ ಮೇಲಿರುವವರು ಮತ್ತು ಮಧ್ಯಮ ವರ್ಗಕ್ಕಿಂತ ಕೆಳಗಿರುವವರ ಮತಗಳನ್ನು ಸೆಳೆಯುವುದಕ್ಕಾಗಿ ಕಾಂಗ್ರೆಸ್‌ ಪಕ್ಷವು ರಾಹುಲ್‌ ಗಾಂಧಿಯವರ ಆಲೋಚನೆ­ಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿದೆ.ದೇಶದಲ್ಲಿ ಬಡತನ ರೇಖೆಗಿಂತ ಮೇಲಿರುವವರು ಆದರೆ ಮಧ್ಯಮ ವರ್ಗಕ್ಕಿಂತ ಕೆಳಗಿರುವವರ ಸಂಖ್ಯೆ 70 ಕೋಟಿ ಇದೆ. ಈ ವರ್ಗವನ್ನು ಪ್ರಮುಖವಾಗಿ ಗಮನದಲ್ಲಿಟ್ಟು ಚುನಾವಣಾ ಪ್ರಚಾರ ನಡೆಸಬೇಕೆಂದು ಜನವರಿ 17ರ ಎಐಸಿಸಿ ಸಭೆಯಲ್ಲಿ ರಾಹುಲ್‌ ಗಾಂಧಿ ಹೇಳಿದ್ದರು.

ರಾಹುಲ್‌ ಅವರ ಈ ಯೋಚನೆಯನ್ನು ಆ ವರ್ಗದವರಿಗೆ ಪ್ರಚಾರ ಸಂದರ್ಭದಲ್ಲಿ ಮನದಟ್ಟು ಮಾಡಿಕೊಡಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರು ಪಕ್ಷದ ಎಲ್ಲ ರಾಜ್ಯ ಘಟಕಗಳ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಕಾಂಗ್ರೆಸ್‌ ಗುರುತಿಸಿರುವ 34 ವರ್ಗಗಳಲ್ಲಿ ಉತ್ತರ ಪ್ರದೇಶದ ನೇಕಾರರು, ಕೇರಳದ ತೋಟಗಾರಿಕಾ ಕಾರ್ಮಿಕರು, ಮುಂಬೈ ಡಬ್ಬಾ­ವಾಲಾಗಳು, ಮೀನುಗಾರರು, ರೈಲ್ವೆ ಇಲಾಖೆಯ ಕಾವಲುಗಾರರು ಮತ್ತು ಬೀದಿ ಬದಿ ವ್ಯಾಪಾರಿಗಳು ಸೇರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.