ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ತಿಂಗಳಿಗೆ ಗುಂಡಿಬಿದ್ದ ರಾಜ್ಯ ಹೆದ್ದಾರಿ

Last Updated 18 ಜುಲೈ 2013, 9:45 IST
ಅಕ್ಷರ ಗಾತ್ರ

ಮೂಡಿಗೆರೆ: ಕಳೆದ ಎಂಟು ತಿಂಗಳ ಹಿಂದೆ 90 ಲಕ್ಷ ವೆಚ್ಚದಲ್ಲಿ ಮರು ಡಾಂಬರೀಕರಣಗೊಂಡಿದ್ದ ರಾಜ್ಯ ಹೆದ್ದಾರಿ ಕಡೂರು ಮಂಗಳೂರು ರಸ್ತೆಯು, ಮೇಗಲಪೇಟೆ, ರೈತಭವನ, ಹ್ಯಾಂಡ್‌ಪೋಸ್ಟ್‌ಗಳಲ್ಲಿ ಗುಂಡಿ ಬಿದ್ದಿದ್ದು, ಸಂಚಾರ ದುಸ್ತರವಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಹ್ಯಾಂಡ್‌ಪೋಸ್ಟ್‌ನಿಂದ ಕೊಲ್ಲಿಬೈಲು ಗ್ರಾಮದ ವರೆಗೂ ಸುಮಾರು 90 ಲಕ್ಷ ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡಲಾಗಿತ್ತು. ಡಾಂಬರೀಕರಣವನ್ನು ರಾತ್ರೋರಾತ್ರಿ ನಡೆಸಲಾಗಿದ್ದು, ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಹಳೆ ಮೂಡಿ ಗೆರೆಯಲ್ಲಿ ಕೆಜೆಪಿ, ಜೆಡಿಎಸ್ ಮುಂತಾದ ರಾಜಕೀಯ ಪಕ್ಷಗಳು ಪ್ರತಿ ಭಟನೆ ನಡೆಸಿ, ಕಳಪೆ ಕಾಮಗಾರಿ ಸರಿಪಡಿ ಸುವಂತೆ ಒತ್ತಾಯಿಸಿದ್ದರು.

ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರೂ ಮೇಗಲ ಪೇಟೆಯಲ್ಲಿ ಡಾಂಬರೀಕರಣ ಮಾಡು ವಾಗ ಪುನಃ ಕಳಪೆಯಾಗಿದೆ ಎಂದು ಆರೋಪಿಸಿ ಮೊದಲ ಪ್ರತಿಭಟನೆ ನಡೆದು ಎರಡು ದಿನಗಳ ನಂತರ ಜಿಲ್ಲಾ ಪಂಚಾ ಯಿತಿ ಸದಸ್ಯ ಎಂ.ಎಸ್. ಅನಂತ್ ಮತ್ತು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದ್ದವು.

ಆದರೆ ಅಂದು ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು ಗುಣಮಟ್ಟ ಸಮರ್ಪಕವಾಗಿದೆ ಎಂದು ಪ್ರತಿಭಟ ನಾಕಾರರಿಗೆ ಸಮಜಾಯಿಸಿ ನೀಡಿದ್ದರು. ಆದರೆ ಡಾಂಬರೀಕರಣಗೊಂಡು ಕೇವಲ 8ತಿಂಗಳು ಕಳೆಯುವುದರೊಳಗೆ ರಸ್ತೆಯಲ್ಲಿ ನೂರಾರು ಗುಂಡಿಗಳು ಬಿದ್ದಿದ್ದು, ಸಂಚಾರ ದುಸ್ತರವಾಗಿದೆ.

ಈ ರಸ್ತೆಯು ಧರ್ಮಸ್ಥಳ, ಹೊರ ನಾಡು, ಕಳಸ,ಮತ್ತು ಕರಾವಳಿ ಪ್ರದೇಶ ಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಚಲಿಸು ತ್ತಿದ್ದು, ಗುಂಡಿಬಿದ್ದ ರಸ್ತೆಯಿಂದಾಗಿ ಚಾಲಕರು ಹರ ಸಾಹಸಪಟ್ಟು ಸಾಗ ಬೇಕಾಗಿದೆ. ಕೂಡಲೇ ಸಂಬಂಧಿಸಿದ ಇಲಾಖೆ, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT