ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಗಳ ಜೊತೆ ಗುಣವಂತರೂ ಆಗಿ

Last Updated 21 ಡಿಸೆಂಬರ್ 2013, 20:07 IST
ಅಕ್ಷರ ಗಾತ್ರ

ನೆಲಮಂಗಲ: ‘ಪಾಲಕರು ತಮ್ಮ ಮಕ್ಕಳ ಅಂಕ ಗಳಿಕೆಗೆ ಮಾತ್ರ ಮಾನ್ಯತೆ ನೀಡದೆ ಗುಣವಂತರು, ಚಾರಿತ್ರ್ಯವಂತ­ರಾಗುವಂತೆ ಕಾಳಜಿ ವಹಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ತಿಳಿಸಿದರು.

ಸ್ಥಳೀಯ ಯೂರೊ ಕಿಡ್ಸ್‌ ಮತ್ತು ಹರ್ಷ ಇಂಟರ್‌ನ್ಯಾಷನಲ್‌ ಶಾಲೆ ಏರ್ಪಡಿಸಿದ್ದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

‘ಶಿಕ್ಷಣವೆಂದರೆ ಬರಿ ಮಾಹಿತಿ ತುರುಕುವುದಲ್ಲ. ಅಂತ­ರಂಗದಲ್ಲಿ ಸುಪ್ತ­ವಾಗಿರುವ ಪರಿ­ಪೂರ್ಣತೆ­ಹೊರ­ತೆಗೆದು, ಚೈತನ್ಯಭರಿತ, ಚಾರಿತ್ರ್ಯ­ವಂತ ವ್ಯಕ್ತಿಗಳನ್ನು ರೂಪಿಸುವುದು’ ಎಂದರು.

₨ 10 ಲಕ್ಷ ಅನುದಾನ
ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರಂಗಮಂದಿರ ನಿರ್ಮಾಣಕ್ಕಾಗಿ ₨10 ಲಕ್ಷ ಅನು­ದಾನ ಬಿಡುಗಡೆ ಮಾಡುವುದಾಗಿ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ತಿಳಿಸಿದರು.

ಕಾಲೇಜಿಗೆ ದಿಢೀರ್‌ ಭೇಟಿ ನೀಡಿದ ಅವರು ಕುಂದು ಕೊರತೆ­ಗಳನ್ನು ವಿಚಾರಿಸಿದರು. ಪ್ರಭಾರ ಪ್ರಾಂಶುಪಾಲ ಪರಶಿವಮೂರ್ತಿ ಅವರ ಕೋರಿಕೆ ಮೇರೆಗೆ ರಂಗ ಮಂದಿರ ನಿರ್ಮಿಸಲು ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT