ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಬೌಷರ್ ವಿದಾಯ

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ವಿಶ್ವದ ಶ್ರೇಷ್ಠ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು ಎನಿಸಿರುವ ದಕ್ಷಿಣ ಆಫ್ರಿಕಾ ತಂಡದ ಮಾರ್ಕ್ ಬೌಷರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಕೌಂಟಿ ತಂಡದ ಎದುರಿನ ಅಭ್ಯಾಸ ಪಂದ್ಯದಲ್ಲಿ ಸೋಮವಾರ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಬೇಲ್ಸ್ ಬಡಿದು ಬೌಷರ್ ಅವರ ಎಡಗಣ್ಣಿಗೆ ತೀವ್ರ ಗಾಯವಾಗಿದೆ. ಹಾಗಾಗಿ ಅವರು ಮೂರು ಗಂಟೆ ಶಸ್ತ್ರ ಚಿಕಿತ್ಸೆಗೆ ಒಳಗಾದರು. ದಕ್ಷಿಣ ಆಫ್ರಿಕಾ ಈಗ ಇಂಗ್ಲೆಂಡ್ ಪ್ರವಾಸದಲ್ಲಿದೆ. 147 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಅವರು 555 ವಿಕೆಟ್ ಪತನಕ್ಕೆ (532 ಕ್ಯಾಚ್ ಹಾಗೂ 23 ಸ್ಟಂಪ್) ಕಾರಣರಾಗಿದ್ದರು. ಇದು ವಿಶ್ವದಾಖಲೆ ಕೂಡ. ಐದು ಶತಕ ಸಮೇತ 5515 ರನ್ ಗಳಿಸಿದ್ದರು. 295 ಏಕದಿನ ಪಂದ್ಯಗಳಲ್ಲಿ 425 ವಿಕೆಟ್ ಪತನಕ್ಕೆ (403 ಕ್ಯಾಚ್ ಹಾಗೂ 22 ಸ್ಟಂಪ್) ನೆರವಾಗಿದ್ದರು. 4686 ರನ್ ಗಳಿಸಿದ್ದಾರೆ.

`ಈ ನಿರ್ಧಾರ ತೆಗೆದುಕೊಳ್ಳಲು ನನಗೆ ತುಂಬಾ ನೋವಾಗುತ್ತಿದೆ. ಕಣ್ಣಿಗೆ ಆಗಿರುವ ಈ ಗಾಯದ ಕಾರಣ ಮುಂದೆ ನನಗೆ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ~ ಎಂದು 35 ವರ್ಷ ವಯಸ್ಸಿನ ಬೌಷರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT