ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ರಂಪಾಟ; ಇಂದು ಜೊತೆ ಜೊತೆಯಲಿ...

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಿಕಿ ಪಾಂಟಿಂಗ್, ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್, ಹರಭಜನ್ ಸಿಂಗ್...
ಈ ಆಟಗಾರರು ಒಂದೇ ತಂಡದಲ್ಲಿ ಆಡುವುದನ್ನು 2008ರ ಆ ಘಟನೆಯ ಬಳಿಕ ಊಹಿಸಿಕೊಳ್ಳುವುದೂ ಕಷ್ಟವಿತ್ತು. ಅದಕ್ಕೆ ಕಾರಣ `ಮಂಕಿಗೇಟ್' ಪ್ರಕರಣ. ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಹರಭಜನ್ ಸಿಂಗ್ ಕಾಂಗರೂ ಪಡೆಯ ಆ್ಯಂಡ್ರ್ಯೂ ಸೈಮಂಡ್ಸ್ ಅವರ ಮೇಲೆ ಜನಾಂಗೀಯ ನಿಂದನೆ ಮಾಡಿದ್ದರು ಎಂಬ ಆರೋಪ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿತ್ತು. ಉಭಯ ಕ್ರಿಕೆಟ್ ತಂಡಗಳ ನಡುವಿನ ಸ್ನೇಹಕ್ಕೆ ಧಕ್ಕೆಯುಂಟು ಮಾಡಿತ್ತು.

ಆಗ ಭಾರತ ತಂಡದ ನಾಯಕರಾಗಿದ್ದು ಕುಂಬ್ಳೆ. ಆಸ್ಟ್ರೇಲಿಯಾ ತಂಡವನ್ನು ಪಾಂಟಿಂಗ್ ಮುನ್ನಡೆಸಿದ್ದರು. ಆ ಘಟನೆಯ ಕಾರಣ ಭಾರತದವರು ಆಸ್ಟ್ರೇಲಿಯಾ ಪ್ರವಾಸವನ್ನೇ ರದ್ದುಗೊಳಿಸಲು ಮುಂದಾಗಿದ್ದರು. ಸಚಿನ್ ಮಧ್ಯ ಪ್ರವೇಶದ ಕಾರಣ ಪ್ರಕರಣ ಕೊಂಚ ಶಮನಗೊಂಡಿತ್ತು.

ಆದರೆ ಐಪಿಲ್ ಟೂರ್ನಿಯು ಈಗ ಆ ಚಿತ್ರಣವನ್ನೇ ಬದಲಾಯಿಸಿದೆ. ಮುಂಬೈ ಇಂಡಿಯನ್ಸ್ ನಾಯಕ ಪಾಂಟಿಂಗ್. ಅವರ ಸಾರಥ್ಯದಲ್ಲಿ ಸಚಿನ್, ಹರಭಜನ್ ಆಡುತ್ತಿದ್ದಾರೆ. ಕುಂಬ್ಳೆ ಈ ತಂಡದ ಮುಖ್ಯ ಸಲಹೆಗಾರ.

ಹಣದ ಹರಿವು ಒಂದು ಪ್ರಕರಣದ ಚಿತ್ರಣವನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಈ ಆಟಗಾರರೆಲ್ಲಾ ಈಗ ಜೊತೆಯಾಗಿ ಆಡುತ್ತಿರುವುದೇ ಸಾಕ್ಷಿ. ವೈರಿಗಳನ್ನು ಸ್ನೇಹಿತರನ್ನಾಗಿಸಿದೆ. `ಈಗ ನಾವೆಲ್ಲರೂ ಒಂದೇ' ಎಂಬ ಮಂತ್ರವನ್ನು ಪಾಂಟಿಂಗ್ ಜಪಿಸುತ್ತಿದ್ದಾರೆ.

ಈ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು `ಪಂದ್ಯ ಆರಂಭವಾಗುವ ಮುನ್ನ ವಾತಾವರಣ ಹಾಗೂ ಪಿಚ್‌ನ ಸ್ಥಿತಿ ನೋಡಿ ಸಚಿನ್ ಜೊತೆ ಇನಿಂಗ್ಸ್ ಆರಂಭಿಸುವ ಆಟಗಾರನನ್ನು ನಿರ್ಧಾರ ಮಾಡುತ್ತೇವೆ. ಬೆಂಗಳೂರಿನಲ್ಲಿ ಎರಡು ಮೂರು ದಿನಗಳಿಂದ ಮಳೆ ಸುರಿಯುತ್ತಿದೆ. ಮೊದಲ ಪಂದ್ಯಕ್ಕೆ ಲಸಿತ್ ಮಾಲಿಂಗ ಇಲ್ಲದೇ ಇರುವುದಕ್ಕೆ ಬೇಸರವಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT