ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗೋದಿ ಸಾಗಣೆ ಆರೋಪ

Last Updated 19 ಅಕ್ಟೋಬರ್ 2012, 5:55 IST
ಅಕ್ಷರ ಗಾತ್ರ

ನರಗುಂದ: ಪಟ್ಟಣದ ಸವದತ್ತಿ ರಸ್ತೆಯಲ್ಲಿ ಶುಕ್ರವಾರ ಪಟ್ಟಣದಿಂದ ಬೆಳಗಾವಿ ಕಡೆಗೆ ಸಾಗಿಸಲಾಗುತ್ತಿದ್ದ ಅಕ್ರಮ ಸಾಗಾಣಿಕೆ ನಡೆಯುತ್ತಿತ್ತು ಎನ್ನಲಾಗುತ್ತಿರುವ ಗೋದಿ ಚೀಲಗಳ ಲಾರಿಯನ್ನು ತಹಶೀಲ್ದಾರ ಪ್ರಕಾಶ ಗಣಾಚಾರಿ ನೇತೃತ್ವದಲ್ಲಿ ಸಿಪಿಐ ಪ್ರಶಾಂತ ಸಿದ್ದನಗೌಡ್ರ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಸಾರ್ವಜನಿಕರ  ದೂರಿನ ಮೇರೆಗೆ ದಾಳಿ ನಡೆಸಿದ  ಸಿಪಿಐ ಹಾಗೂ ತಹಶೀಲ್ದಾರರು  ಲಾರಿಯನ್ನು ವಶಪಡಿಸಿಕೊಂಡರು.  ಈ ಗೋದಿ ಲಾರಿ ಜೊತೆ ಇನ್ನೊಂದು ಲಾರಿ ಇತ್ತು. ಆದರೆ ಆಗಲೇ ಅದು ಬೆಳಗಾವಿ ಕಡೆಗೆ ಸಾಗಿತ್ತು. ಈ ಲಾರಿಗಳಲ್ಲಿದ್ದ 126.9 ಕ್ವಿಂಟಲ್  ಗೋದಿ ಚೀಲಗಳು ಪಟ್ಟಣದ  ಶಿವಯೋಗಿ ಸಿದ್ಧರಾಮೇಶ್ವರ ಪ್ಲೋರ್‌ಮಿಲ್‌ಗಳಿಗೆ ಸೇರಿದ್ದು ಎಂದು ಅದರ ಮಾಲಕರು ತಹಶೀಲ್ದಾರರ ಎದುರು ಸ್ಪಷ್ಟಪಡಿಸಿದರು.

ಸಾರ್ವಜನಿಕರ ಆಗ್ರಹ:  ಇದು ಅಕ್ರಮವಾಗಿ ಸಾಗಿಸುತ್ತಿರುವ ರೇಷನ್ ಗೋದಿ;  ಆದ್ದರಿಂದ ಇದನ್ನು ಕೂಡಲೇ ಮುಟ್ಟುಗೋಲು ಹಾಕಬೇಕು ಎಂದು ಬಸವರಾಜ  ಸಾಬಳೆ ನೇತೃತ್ವದಲ್ಲಿ ಸಾರ್ವಜನಿಕರು ಆಗ್ರಹಿಸಿದ್ದು ಕಂಡು ಬಂತು.  ಆದ್ದರಿಂದ ಇದರ ಸಲುವಾಗಿ ಎಪಿಎಂಸಿಯಲ್ಲಿ  ಕಾರ್ಯದರ್ಶಿ ಜಿ.ಎ. ಬುರುಡಿಯವರ ಸಮಕ್ಷಮ ತಹಶೀಲ್ದಾರರು ಹಾಗೂ ಸಿಪಿಐ  ನಡುವೆ ಸಭೆ ನಡೆಸಲಾಯಿತು. 

 ಮುಟ್ಟುಗೋಲು ಎಚ್ಚರಿಕೆ: ಈ ಸಂದರ್ಭದಲ್ಲಿ ಸಿದ್ಧರಾಮೇಶ್ವರ  ಪ್ಲೋರ್‌ಮಿಲ್‌ನವರು ಲಾರಿಯಲ್ಲಿರುವ ಗೋದಿ  ಚೀಲಗಳು  ತಮಗೆ ಸೇರ್ದ್ದಿದು, ಅವು ಸಕ್ರಮವಾಗಿವೆ ಎಂದು ಸ್ಪಷ್ಟಪಡಿಸಲು ಮುಂದಾದರು. ಆದರೆ ಅದರ ದಾಖಲಾತಿಗಳನ್ನು ಎಪಿಎಂಸಿ ಕಾರ್ಯದರ್ಶಿ ಜಿ.ಎ. ಬುರುಡಿ ಪರಿಶೀಲಿಸಿದಾಗ  ಸರಿಯಾಗಿರದೇ ಹೋಗಿದ್ದರಿಂದ ಇರುವ ಎಲ್ಲ ದಾಖಲಾತಿಗಳನ್ನು ತಹಶೀಲ್ದಾರರು ತಮ್ಮ ವಶಕ್ಕೆ  ತೆಗೆದುಕೊಂಡು ಅದಕ್ಕೆ ಸೀಲ್ ಮಾಡಿದರು.

ಇದರ ಬಗ್ಗೆ ಸಂಪೂರ್ಣ ದಾಖಲಾತಿಗಳನ್ನು  ಶುಕ್ರವಾರ ಮಧ್ಯಾಹ್ನ 12 ಗಂಟೆಗಳೊಳಗಾಗಿ ಹಾಜರು ಪಡಿಸಿ ಇವು ಸಕ್ರಮ ಗೋದಿಯೆಂದು ಸಾಬೀತು ಪಡಿಸಬೇಕು; ಇಲ್ಲವಾದರೆ ಈ ಗೋದಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಎಪಿಎಂಸಿ  ಸದಸ್ಯ ಎಸ್. ಬಿ. ಕರಿಗೌಡ್ರ, ರಾಜುಗೌಡ ಪಾಟೀಲ, ಅಶೋಕ ಪತ್ರಿ, ಎಚ್. ಎಂ. ಪಾಣಿಗಟ್ಟಿ, ಬಿ. ಎಚ್. ಪಠಾಣ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT