ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚುಕಟ್ಟು ನಿರ್ವಹಣೆಗೆ ತಾಕೀತು

Last Updated 3 ಫೆಬ್ರುವರಿ 2011, 7:15 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ವಸತಿ, ಸಾರಿಗೆ, ಕುಡಿಯುವ ನೀರು, ವಿದ್ಯುತ್ ಸರಬರಾಜು ಸೇರಿದಂತೆ ಯಾವುದೇ ತೊಂದರೆಯಾಗದಂತೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಸೂಚಿಸಿದರು.ನಗರದ ಹಳೆ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿರುವ ವಿಶ್ವ ಕನ್ನಡ ಸಮ್ಮೇಳನ ಕಚೇರಿಯಲ್ಲಿ ಬುಧವಾರ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ‘ಎಲ್ಲ ಇಲಾಖೆಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದು ಹೇಳಿದರು.

‘ನಗರ ಪ್ರವೇಶಿಸುವ ಹಾಗೂ ಮೆರವಣಿಗೆ ಸಾಗುವ ಎಲ್ಲ ರಸ್ತೆಗಳ ದುರಸ್ತಿ ಮಾಡಬೇಕು. ನಗರದಿಂದ 25 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಪ್ರವಾಸಿ ಮಂದಿರಗಳನ್ನು ವಸತಿಗೆ ಸಜ್ಜುಗೊಳಿಸಬೇಕು’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ‘ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಎಲ್ಲ ವಸತಿ ನಿಲಯಗಳನ್ನು ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳ ವಸತಿಗೆ ಅಣಿಗೊಳಿಸಬೇಕು. ಅವಶ್ಯವಿರುವಷ್ಟು ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಬೇಕು’ ಎಂದರು.

ಸಚಿವ ಉಮೇಶ ಕತ್ತಿ ಮಾತನಾಡಿ, ‘ತೋಟಗಾರಿಕೆ ಇಲಾಖೆಯವರು ಬೆಂಗಳೂರಿನ ಲಾಲಬಾಗ್‌ನಲ್ಲಿ ಮಾಡುವ ಮಾದರಿಯಲ್ಲಿ ಅತ್ಯಂತ ಸುಂದರವಾದ ಫಲಪುಷ್ಪ ಪ್ರದರ್ಶನ ಏರ್ಪಡಿಸಬೇಕು. ಬೇಕಾದರೆ ಪ್ರವೇಶ ದರ ನಿಗದಿಪಡಿಸಿರಿ. ಆದರೆ ಪ್ರದರ್ಶನ ಮಾತ್ರ ಭರ್ಜರಿಯಾಗಿರಬೇಕು’ ಎಂದು ಸೂಚಿಸಿದರು.

ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ಸಮ್ಮೇಳನ ಸಂದರ್ಭದಲ್ಲಿ ನಗರದಲ್ಲಿ  ಸಂಚಾರಕ್ಕಾಗಿ 20 ವೊಲ್ವೋ ಬಸ್ ನೀಡಬೇಕು. ತಾತ್ಕಾಲಿಕವಾಗಿ ನೀಡುವುದಾದರೆ ಬೇಡ. ನಮ್ಮ ಶಾಲಾ-ಕಾಲೇಜುಗಳ ಬಸ್ ಮೂಲಕವೇ ವ್ಯವಸ್ಥೆ ಮಾಡುತ್ತೇವೆ. ಅವುಗಳನ್ನು ಶಾಶ್ವತವಾಗಿ ಇಲ್ಲಿಗೇ ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT