ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟ್ಟಕ್ಕಲರಿ ನರ್ತನ

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ನಗರದ `ಅಟ್ಟಕ್ಕಲರಿ~ ಕಲಾ ಕೇಂದ್ರ, ಸಮಕಾಲೀನ ನೃತ್ಯದಲ್ಲಿ ನವೀನ ಪ್ರಯೋಗಗಳನ್ನು ಮಾಡುತ್ತಿರುವ, ಈ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ವೃತ್ತಿಪರತೆ ತೋರುತ್ತಿರುವ ಸಂಸ್ಥೆ. ನೃತ್ಯ, ರಂಗಭೂಮಿ ಜೊತೆಗೆ ಬಹು ಮಾಧ್ಯಮದ ಸಾಧ್ಯತೆಗಳನ್ನು ಬಳಸಿಕೊಂಡು, ಸಮಕಾಲೀನ ಸಮಸ್ಯೆ, ಮನುಷ್ಯನ ಒಳತೋಟಿಗಳನ್ನು ಬಿಂಬಿಸುವ ವಿಭಿನ್ನ ನೃತ್ಯ ರೂಪಕಗಳನ್ನು ಪ್ರಸ್ತುತ ಪಡಿಸುತ್ತಿದೆ.

`ಅಟ್ಟಕ್ಕಲರಿ~ಯ ಹಿರಿಯ ನೃತ್ಯ ಕಲಾವಿದರಾದ ದಿಯಾ ನಾಯ್ಡು ಮತ್ತು ಡೆನ್ನಿ ಪಾಲ್ `ರಾಬರ್ಟ್ ಬಾಷ್ ಯಂಗ್ ಕೋರಿಯಾಗ್ರಾಫರ್~ ಪ್ರಶಸ್ತಿ ಪಡೆದಿದ್ದಾರೆ. `ರಾಬರ್ಟ್ ಬಾಷ್ ಎಂಜಿನಿಯರಿಂಗ್ ಮತ್ತು ಬಿಸಿನೆಸ್ ಸೊಲ್ಯುಷನ್~ ಕಲೆಗಾಗಿ ಮೀಸಲಿಟ್ಟಿರುವ ನಿಧಿಯಲ್ಲಿ ಎರಡನೇ ವರ್ಷ ಸತತವಾಗಿ ಈ ಅನುದಾನ ಪಡೆದ ಹೆಗ್ಗಳಿಕೆ ಅಟ್ಟಕ್ಕಲರಿಯದ್ದು.

ಈ ಹಿನ್ನೆಲೆಯಲ್ಲಿ ದಿಯಾ ಮತ್ತು ಡೆನ್ನಿ ಶನಿವಾರ `ನದಿರ್ ಮತ್ತು ಉಯಿರೆ~ ನೃತ್ಯ ರೂಪಕ ಪ್ರಸ್ತುತಪಡಿಸಲಿದ್ದಾರೆ.

`ನದಿರ್~ನಲ್ಲಿ ದಿಯಾ ಒಂಟಿತನ ಮತ್ತು ಅದರೊಳಗೆ ಇರುವ ಬಂಧನದ ಅಂಶವನ್ನು ಬಿಡಿಸಿಟ್ಟಿದ್ದಾರೆ. `ಉಯಿರೆ~ ನೃತ್ಯದಲ್ಲಿ ಡೆನ್ನಿ, ಭೂತ ಮತ್ತು ವರ್ತಮಾನದ ನಡುವಿನ ಸಂಬಂಧ ಬಿಡಿಸಿಟ್ಟಿದ್ದಾರೆ.

ಸ್ಥಳ: ಅಲಯನ್ಸ್ ಫ್ರಾನ್ಸೆ, ತಿಮ್ಮಯ್ಯ ರಸ್ತೆ, ವಸಂತ ನಗರ. ಸಂಜೆ 7.30. ಪ್ರವೇಶ ಉಚಿತ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT