ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಿರುತ್ತರ

Last Updated 22 ಅಕ್ಟೋಬರ್ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು:  ಮಾಹಿತಿ ಹಕ್ಕು ಕಾಯ್ದೆ ಬಳಸಿಕೊಂಡು ಭ್ರಷ್ಟಾಚಾರದ ನಿಗ್ರಹಕ್ಕೆ ಮುಂದಾಗಿರುವ ನಾಗರಿಕ ಸಂಘಟನೆಗಳ ಪ್ರಶ್ನೆಗಳಿಗೆ ಬಿಬಿಎಂಪಿ ಹಾಗೂ ಜಲಮಂಡಲಿ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದೇ ನಾಗರಿಕರು ನಿರಾಶರಾದ ಬೆಳವಣಿಗೆ ಶನಿವಾರ ನಗರದಲ್ಲಿ ನಡೆಯಿತು. 

`ಈಶಾನ್ಯ ಬೆಂಗಳೂರಿನ ಕಲ್ಯಾಣ ಸಂಘಗಳ ಒಕ್ಕೂಟ~ ಎಂಬ ವೇದಿಕೆಯಡಿ 14 ಸಂಘಟನೆಗಳು ಮಾಹಿತಿ ಹಕ್ಕು ಕಾಯ್ದೆ-2005 ಅನುಷ್ಠಾನ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲಿಕೆಯ ಪ್ರಮುಖ ಅಧಿಕಾರಿಗಳು ಹಾಜರಾಗಿರಲಿಲ್ಲ.

ಜಂಟಿ ಆಯುಕ್ತರು ಪಾಲಿಕೆಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.  ಆದರೆ ಒಕ್ಕೂಟದ ಪದಾಧಿಕಾರಿಗಳು, ಪೂರ್ವ ವಿಭಾಗದ ಡಿಸಿಪಿ ಚಂದ್ರಶೇಖರ್ ಮತ್ತು ಲೋಕಾಯುಕ್ತ ವಿಚಕ್ಷಣಾಧಿಕಾರಿ ಮುನಿಕೃಷ್ಣ ಪಾಲ್ಗೊಂಡರು.

ಡಿಸಿಪಿ ಚಂದ್ರಶೇಖರ್ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಎಸ್.ಶಂಕರನ್, `ಮಾಹಿತಿ ಹಕ್ಕನ್ನು ಬಳಸಿಕೊಂಡು ಮಾಹಿತಿ ಬಯಸಿ ಅರ್ಜಿ ಹಾಕಿದರೆ,  ಅರ್ಜಿಯ ಲೋಪ ಹುಡುಕಲು ತೊಡಗುತ್ತಾರೆ~ ಎಂದು ವಿಷಾದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT