ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ಗೈರು: ಗ್ರಾಮ ಸಭೆಗೆ ಬಹಿಷ್ಕಾರ

Last Updated 21 ಸೆಪ್ಟೆಂಬರ್ 2013, 7:43 IST
ಅಕ್ಷರ ಗಾತ್ರ

ಅಕ್ಕಿಆಲೂರ: ಶುಕ್ರವಾರ ಕರೆಯ ಲಾಗಿದ್ದ ಗ್ರಾಮಸಭೆಯಲ್ಲಿ ಕೆಲವು ಅಧಿಕಾರಿಗಳು ಮಾತ್ರ ಪಾಲ್ಗೊಂಡು ಬಹುತೇಕ ಅಧಿಕಾರಿಗಳು ಭಾಗವಹಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವ ಜನಿಕರು ಗ್ರಾಮಸಭೆಯನ್ನು ಸಾಮೂ ಹಿಕವಾಗಿ ಬಹಿಷ್ಕರಿಸಿದರು.

2013–14ನೇ ಸಾಲಿನ ಗ್ರಾಮಸಭೆ ಯನ್ನು ಇಲ್ಲಿಯ ಗ್ರಾ.ಪಂ. ಕಚೇರಿಯಲ್ಲಿ ಶುಕ್ರವಾರ ಮುಂಜಾನೆ 10ಕ್ಕೆ ಏರ್ಪ ಡಿಸಲಾಗಿತ್ತು. ಸಮಯ 12 ಗಂಟೆ ಯಾದರೂ  ನಾಲ್ಕು ಇಲಾಖೆಯ ಅಧಿಕಾರಿಗಳನ್ನು ಹೊರತು ಪಡಿಸಿದರೆ ಪ್ರಮುಖ ಇಲಾಖಾಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. 

ಇದರಿಂದ ಕೆರಳಿದ ಸಾರ್ವಜನಿಕರು ಅಧಿಕಾರಿಗಳ ಅನು ಪಸ್ಥಿತಿಯಲ್ಲಿ ಗ್ರಾಮಸಭೆ ನಡೆಸುವು ದರಲ್ಲಿ ಅರ್ಥವಿಲ್ಲ. ಇಲ್ಲಿ ನಮ್ಮ ಸಮಸ್ ಯೆಗಳಿಗೆ ಸ್ಪಂದಿಸುವರು ಯಾರೂ ಇಲ್ಲ. ಹೀಗಾಗಿ ಸಭೆಯಲ್ಲಿ ಭಾಗವಹಿ ಸದೇ ಸಾಮೂಹಿಕವಾಗಿ ಬಹಿಷ್ಕರಿಸುತ್ತಿ ರುವುದಾಗಿ ಹೇಳಿ ಕಚೇರಿಯಿಂದ ಹೊರ ನಡೆದರು.

ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ದೊರೆಯುತ್ತಿಲ್ಲ. ಸಾರ್ವಜನಿಕರು ಮೂಲ ಸೌಲಭ್ಯಗಳಿಂದ ವಂಚಿತ ರಾಗಿದ್ದಾರೆ. ಹೆಸ್ಕಾಂಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ. ಇವುಗಳ ಜೊತೆಗೆ ಜನಸಾಮಾನ್ಯರು ಅನೇಕ ಸಮಸ್ಯೆಗಳನ್ನು ಹೊತ್ತು ಗ್ರಾಮಸಭೆಗೆ ಆಗಮಿಸಿದ್ದಾರೆ. ಆದರೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಗಳೇ ಇಲ್ಲದಿರುವಾಗ ಗ್ರಾಮಸಭೆ ನಡೆಸು ವುದೇ ಬೇಡ ಎಂದು ಸಾರ್ವಜನಿಕರು ಪಟ್ಟು ಹಿಡಿದು ಅಂತಿಮವಾಗಿ ಸಾಮೂ ಹಿಕವಾಗಿ ಬಹಿಷ್ಕರಿಸುವ ನಿರ್ಣಯ ಪ್ರಕಟಿಸಿದರು.

15 ದಿನಗಳ ಒಳಗಾಗಿ ಮತ್ತೆ ಗ್ರಾಮ ಸಭೆಯಲ್ಲಿ ಏರ್ಪಡಿಸಬೇಕು. ಆ ಸಭೆಯಲ್ಲಿ ಕಡ್ಡಾಯವಾಗಿ ಎಲ್ಲ ಇಲಾ ಖೆಯ ಅಧಿಕಾರಿಗಳು ಪಾಲ್ಗೊಳ್ಳುವಂತೆ ಗಮನ ವಹಿಸುವಂತೆ ಪಿಡಿಒ ಬಿ.ಕೆ.ಸಂಶಿ ಅವರಿಗೆ ಸಾರ್ವಜನಿಕರು ತಾಕೀತು ಮಾಡಿದರು. ಪಿಡಿಒ ಸಂಶಿ ಮಾತನಾಡಿ, ಮುಂದಿನ 3 ದಿನಗಳ ಒಳಗಾಗಿ ಗ್ರಾಮ ಸಭೆಯ ದಿನಾಂಕವನ್ನು ನಿಶ್ಚಯಿಸಲಾಗು ವುದು. ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಸಾರ್ವಜನಿಕ ಸಮಸ್ ಯೆಗಳಿಗೆ ಸ್ಪಂದಿಸುವ ಜೊತೆಗೆ ಇಲಾಖೆಯ ಮಾಹಿತಿಯನ್ನು ಗ್ರಾಮ ಸಭೆಗೆ ತಿಳಿಸುವಂತೆ ಅಧಿಕಾರಿಗಳನ್ನು ಕೋರಲಾಗುವುದು ಎಂದು ಹೇಳಿ ಸಾರ್ವಜನಿಕರನ್ನು ಸಮಾಧಾನ ಪಡಿಸಿದರು.

ಗ್ರಾ.ಪಂ. ಅಧ್ಯಕ್ಷೆ ನಂದಿನಿ ವಿರುಪಣ್ ಣನವರ, ಉಪಾಧ್ಯಕ್ಷ ಪ್ರದೀಪ ಶೇಷಗಿರಿ, ನಗರ ಕಾಂಗ್ರೆಸ್ ಅಧ್ಯಕ್ಷ ಇಂದೂಧರ ಸಾಲಿಮಠ, ಧುರೀಣರಾದ ಟಿ.ಜಿ.ಪಾಟೀಲ, ಫಕ್ಕೀರಗೌಡ ಪಾಟೀಲ, ಶಂಭಯ್ಯ ಮಹಂತಿನಮಠ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಐ.ಅಣ್ಣಿಗೇರಿ, ಬಸವರಾಜ ಹಾಲ ಭಾವಿ, ಬಸವರಾಜ್ ಸಾಲಿಮಠ, ಉಜ್ಜನಗೌಡ ಪಾಟೀಲ, ರಜಿಯಾ ಬೇಗಂ ಹಿತ್ತಲಮನಿ, ಕುಮಾರಸ್ವಾಮಿ ಹಿರೇಮಠ, ವಿಶ್ವನಾಥ ಹಿರೇಮಠ, ಚಂದ್ರಕಾಂತ ಕೂಬಿಹಾಳ, ಅಲ್ತಾಫ್ ಶಿರಹಟ್ಟಿ, ಎಲ್.ಎಚ್.ಹೊನ್ನಣ್ಣನವರ, ವೆಂಕಟೇಶ ಬೊಂಗಾಳೆ, ತಿಪ್ಪಣ್ಣ ಪರಶೀಕ್ಯಾತಿ, ಪ್ರಕಾಶ ರಸಾಳಕರ, ಶಂಕರ ದೇಸಾಯಿ, ಶಿವನಗೌಡ ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT