ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷೆಗೆ ನೀರಿನ ಮಾಹಿತಿಯೇ ಗೊತ್ತಿಲ್ಲ!

Last Updated 8 ಅಕ್ಟೋಬರ್ 2011, 10:10 IST
ಅಕ್ಷರ ಗಾತ್ರ

ಚಾಮರಾಜನಗರ: ನಗರಕ್ಕೆ ಪೂರೈಕೆ ಯಾಗುವ ಕುಡಿಯುವ ನೀರಿನ ಪ್ರಮಾಣವೆಷ್ಟು? ಪ್ರತಿನಿತ್ಯ ವ್ಯಕ್ತಿಯೊಬ್ಬ ನಿಗೆ ನಗರಸಭೆ ಎಷ್ಟು ಲೀಟರ್ ನೀರು ಕೊಡಬೇಕು? ನಗರದ ಪ್ರಥಮ ಪ್ರಜೆಯಾದ ನೀವು ನಿತ್ಯವೂ ಎಷ್ಟು ಲೀಟರ್ ನೀರು ಬಳಸುತ್ತೀರಿ?

-ಪೌರಾಯುಕ್ತರು ಹಾಗೂ ತಾಂತ್ರಿಕ ಶಾಖೆಗೆ ಸ್ವಯಂಪ್ರೇರಿತರಾಗಿ ಬೀಗ ಜಡಿದು ತಮ್ಮ ಕಚೇರಿಯಲ್ಲಿ ಕುಳಿತಿದ್ದ ಅಧ್ಯಕ್ಷೆ ಭಾಗ್ಯಮ್ಮ ಅವರಿಗೆ ಪತ್ರಕರ್ತ ರಿಂದ ಈ ಪ್ರಶ್ನೆಗಳು ಎದುರಾದವು.

ನನಗೆ ಈ ಬಗ್ಗೆ ಮಾಹಿತಿ `ಗೊತ್ತಿಲ್ಲ~ ಎಂದು ಅವರು ಪ್ರತಿಕ್ರಿಯಿಸಿದರು. 14 ತಿಂಗಳಿನಿಂದ ಅಧಿಕಾರ ನಡೆಸುತ್ತಿರುವ ಅವರಿಂದ ಬಂದ `ಗೊತ್ತಿಲ್ಲ~ವೆಂಬ ಉತ್ತರಕ್ಕೆ ಕಚೇರಿಯಲ್ಲಿ ಹಾಜರಿದ್ದ ಕೆಲವು ಸದಸ್ಯರು ತಬ್ಬಿಬ್ಬುಗೊಂಡರು.

ಜತೆಗೆ, `ನಾನು ಜನರಿಗೆ ಕುಡಿಯುವ ನೀರು ಕೊಡಿಸಲು ಹೋರಾಟ ಮಾಡು ತ್ತಿದ್ದೇನೆ~ ಎಂದು ಹೇಳಿದ ಭಾಗ್ಯಮ್ಮ ಎಲ್ಲರನ್ನೂ ಚಕಿತಗೊಳಿಸಿದರು!

ದಿಗ್ಬಂಧನ ಪ್ರಹಸನ: ಅಧ್ಯಕ್ಷೆ ಭಾಗ್ಯಮ್ಮ ಪೌರಾಯುಕ್ತರ ಕಚೇರಿ ಹಾಗೂ ತಾಂತ್ರಿಕ ಶಾಖೆಯ ಕಚೇರಿಗೆ ಏಕಾಏಕಿ ಬೀಗ ಹಾಕಿ ಪ್ರಸಹನಕ್ಕೂ ಕಾರಣರಾದರು.

ಮೊದಲು ಪೌರಾಯುಕ್ತರ ಕಚೇರಿಗೆ ಬೀಗ ಜಡಿದರು. ಪೌರಾಯುಕ್ತರು ನೇರವಾಗಿ ಬಂದು ತಾಂತ್ರಿಕ ಶಾಖೆಯಲ್ಲಿ ಕುಳಿತುಕೊಂಡರು. ಅಲ್ಲಿಗೆ ತೆರಳಿದ ಭಾಗ್ಯಮ್ಮ ಆ ಕೊಠಡಿಗೂ ಬೀಗ ಹಾಕಿದರು. ಇದಕ್ಕೆ ಕೆಲವು ಸದಸ್ಯರು ಬೆಂಬಲ  ನೀಡಿದರು. ನೀರಿನ ಸಮಸ್ಯೆ ಬಗ್ಗೆ ರ್ಚಿಸದೆ ಅಧ್ಯಕ್ಷರು ಏಕಮುಖ ನಿಲುವು ತೆಗೆದುಕೊಂಡ ಪರಿಣಾಮ ನಗರಸಭೆ ಸಿಬ್ಬಂದಿ ದಿಗ್ಬಂಧನದಿಂದ ಪರದಾಡು ವಂತಾಯಿತು.

ಕೊನೆಗೆ, ಪೊಲೀಸರು ಮಧ್ಯಪ್ರವೇಶಿಸಿ ದರು. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಬಾ ರದು. ತಾವು ಜವಾಬ್ದಾರಿಯುತ ಅಧ್ಯಕ್ಷ ಸ್ಥಾನದಲ್ಲಿದ್ದೀರಿ. ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಕುಳಿತು ಸಮಸ್ಯೆ ಬಗೆ ಹರಿಸಿಕೊಳ್ಳಬೇಕು ಎಂದು ಬುದ್ಧಿ ಹೇಳಿ ದರು. ಕೊನೆಗೆ, ಬೀಗ ತೆಗೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT