ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನನ್ಯ ದೇಶಪ್ರೇಮಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ

Last Updated 26 ಮಾರ್ಚ್ 2011, 19:30 IST
ಅಕ್ಷರ ಗಾತ್ರ

 ಸಿನಿಮಾ, ಸಾಹಿತ್ಯ, ಪರಿಸರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ನಳಿನಿ ವೆಂಕಪ್ಪ ಅವರ ‘ಅನನ್ಯ ದೇಶಪ್ರೇಮಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ’ ಯುವಜನರಿಗೆ ಸ್ಫೂರ್ತಿದಾಯಕ ಆಗಬಲ್ಲ ಪುಸ್ತಕ. ಸ್ವತಂತ್ರ ಭಾರತದ ಪ್ರಥಮ ಸೇನಾನಿಯಾದ ಕಾರ್ಯಪ್ಪನವರು ತಮ್ಮ ಸೇನಾ ಚಟುವಟಿಕೆಗಳು ಮಾತ್ರವಲ್ಲದೆ, ಸಾಮಾಜಿಕ ವ್ಯಕ್ತಿತ್ವದಿಂದಲೂ ದೇಶವನ್ನು ಪ್ರಭಾವಿಸಿದ ಅಪರೂಪದ ನಾಯಕರಲ್ಲೊಬ್ಬರು. ಸೇನಾನಿ ಆಗಿದ್ದುಕೊಂಡು ಯುದ್ಧರಹಿತ ದಿನಗಳ ಕನಸು ಕಂಡಿದ್ದ ಕಾರ್ಯಪ್ಪ ಸಮಾಜದ ಆರೋಗ್ಯವನ್ನೇ ತಮ್ಮ ಜೀವನದ ಧ್ಯೇಯವಾಗಿಸಿಕೊಂಡವರು.

ಅನನ್ಯ ಚೇತನ ಕಾರ್ಯಪ್ಪನವರ ಬದುಕು-ಸಾಧನೆಯನ್ನು ಕಟ್ಟಿಕೊಡುವ ಪ್ರಯತ್ನವನ್ನು ನಳಿನಿ ವೆಂಕಪ್ಪ ಅವರು ಆಸಕ್ತಿ-ಆಸ್ಥೆಯಿಂದ ಮಾಡಿದ್ದಾರೆ. ಸಾಕಷ್ಟು ವಿವರಗಳನ್ನು ಸಂಗ್ರಹಿಸಿ, ಅವುಗಳನ್ನು ‘ಜೀವನ ಚಿತ್ರ’ದ ಚೌಕಟ್ಟಿನಲ್ಲಿ ಓರಣವಾಗಿಸುವ ಅವರ ಪ್ರಯತ್ನ ಗಮನಸೆಳೆಯುವಂತಿದೆ.

ಅನನ್ಯ ದೇಶಪ್ರೇಮಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ
ಲೇ: ನಳಿನಿ ವೆಂಕಪ್ಪ
ಪು: 140; ಬೆ: ರೂ. 100; ಪ್ರ: ಯಶಸ್ವಿ ಪ್ರಕಾಶನ, ‘ಸಂಕಲ್ಪ’, 43/4, 5ನೇ ಕ್ರಾಸ್, ಕಾಮಾಕ್ಯ ಲೇಔಟ್, ಬನಶಂಕರಿ 3ನೇ ಸ್ಟೇಜ್, 3ನೇ ಫೇಸ್, 5ನೇ ಬ್ಲಾಕ್, ಬೆಂಗಳೂರು-560085

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT