ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ್ ಕಪೂರ್ ಸಿಕ್ಸ್‌ಪ್ಯಾಕ್ ಸಾಹಸ

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದೇಹ ದಂಡಿಸಬೇಕು. ವಜ್ರದೇಹಿಯಾಗಬೇಕು; ಸಲ್ಮಾನ್‌ನಂತೆ. ಹೃತಿಕ್ ರೋಷನ್, ರಣಬೀರ್ ಕಪೂರ್ ಇವರನ್ನು ನೋಡಿದಾಗಲೆಲ್ಲ ನಾನು ಸಾಕಷ್ಟು ಪರಿಶ್ರಮ ಪಡಲಿಲ್ಲ ಎನಿಸುತ್ತದೆ ಎಂದು ಅನಿಲ್ ಕಪೂರ್ ತಮ್ಮ 53ನೆಯ ಹುಟ್ಟುಹಬ್ಬ ಮುಗಿಸಿಕೊಂಡು ಹೇಳಿದ್ದಾರೆ.

ಈಗ ಸಿಕ್ಸ್ ಪ್ಯಾಕ್‌ಗಾಗಿ ಪರಿಶ್ರಮ ಪಡುತ್ತಿರುವುದಾಗಿಯೂ ಅನಿಲ್ ಕಪೂರ್ ಹೇಳಿಕೊಂಡಿದ್ದಾರೆ. ವಯಸ್ಸೆನ್ನುವುದು ಕೇವಲ ಅಂಕಿಸಂಖ್ಯೆಗಳ ಆಟ. ದೇಹ ಮನಸಿನ ಗುಲಾಮ. ಹಾಗಾಗಿ ದೇಹವನ್ನು ದಂಡಿಸುತ್ತಲೇ ನಿಯಂತ್ರಣದಲ್ಲಿ ಇರಿಸಿಕೊಳ್ಳಬಯಸುತ್ತೇನೆ. ಮಗ ಹರ್ಷವರ್ಧನನ ಸಹಾಯದಿಂದ ಇದನ್ನು ಸಾಧಿಸಬ್ಲ್ಲಲೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿರುವ ಅನಿಲ್ ಕಪೂರ್‌ಗೆ ತಾವು ಈ ಹಿಂದೆಯೇ ವಜ್ರದೇಹಿಯಾಗಲು ಯತ್ನಿಸದಿರುವುದಕ್ಕೆ ಪಶ್ಚಾತ್ತಾಪವೂ ಇದೆಯಂತೆ.

`ಆಹಾರದ ಬಗ್ಗೆ ಯಾವಾಗಲೂ ಎಚ್ಚರಿಕೆ ವಹಿಸುತ್ತೇನೆ. ದಲೈ ಲಾಮಾ ಅವರಂತೆ, ಸಕಾರಾತ್ಮಕ ಆಹಾರ ಸೇವನೆಯ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇನೆ. ಇತ್ತೀಚೆಗೆ ದಲೈ ಲಾಮಾ ಅವರನ್ನು ಭೇಟಿಯಾಗುವ ಅವಕಾಶ ದೊರೆತಿತ್ತು. ಅವರ ಸಾಮೀಪ್ಯದಿಂದಲೇ ಸಾಕಷ್ಟು ಕಲಿತಂತಾಗಿದೆ. ಅವರ ಮಾತುಗಳನ್ನು ಕೇಳಿಯೇ ಪರಿಶುದ್ಧನಾದಂಥ ಭಾವ ಆವರಿಸಿಕೊಂಡಿತ್ತು. ಆ ಹಿರಿಯ ಜೀವದಂತೆ ಬದುಕಿನ ದೃಷ್ಟಿ ಬದಲಿಸಿಕೊಳ್ಳಲು ಬಯಸಿದ್ದೇನೆ' ಎಂದೆಲ್ಲ ಅನಿಲ್ ಕಪೂರ್ ಹೇಳಿದ್ದಾರೆ.

`ಹೇಗೆ ಬದುಕಬೇಕು? ಏನು ಯೋಚಿಸಬೇಕು ಎನ್ನುವುದು ವೈಯಕ್ತಿಕವಾಗಿದೆ. ಆದರೆ ನೀನು ನಿನ್ನಷ್ಟಕ್ಕೆ ಮಾತ್ರ ಸೀಮಿತನಾದರೆ ರೋಗಗ್ರಸ್ತನಾಗುವೆ' ಎಂದು ದಲೈ ಲಾಮಾ ಹೇಳಿದರಂತೆ. ಅವರಂತೆ ವಿಶಾಲವಾದ ದೃಷ್ಟಿಕೋನ ಹೊಂದಲು ಅನಿಲ್ ನಿರ್ಧರಿಸಿದ್ದಾರಂತೆ.

ಬದುಕಿನಲ್ಲಿ ಯಾವುದೂ ಸುಲಭವಾಗಿ ದೊರೆತಿಲ್ಲ. ಎಲ್ಲಕ್ಕೂ ಕಷ್ಟ ಪಟ್ಟಿದ್ದೇನೆ. ಹಾಗಾಗಿ ಪರಿಶ್ರಮಿಸುವುದೀಗ ಅಭ್ಯಾಸವಾಗಿದೆ. ಪಡೆದಿರುವುದೆಲ್ಲವೂ ಪರಿಶ್ರಮದಿಂದಲೇ ಎಂಬ ಸಮಾಧಾನವೇ ಸಾಧನೆಯಾಗಿದೆ ಎನ್ನುತ್ತಾರೆ ಅನಿಲ್ ಕಪೂರ್.

`ಸಮೋಸಾ ತಿನ್ನುವುದು ಇಷ್ಟ. ಆದರೆ ಇಡಿಯಾಗಿ ತಿನ್ನುವುದಿಲ್ಲ. ಸಮೋಸಾದೊಳಗಿನ ಪಲ್ಯವನ್ನು ಹಾಗೆಯೇ ಬಿಟ್ಟು, ಮೇಲಿನ ಕುರುಕಲು ಪದರ ತಿಂದು ತೃಪ್ತನಾಗುತ್ತೇನೆ' ಎನ್ನುವ ಅನಿಲ್ ಕಪೂರ್‌ಗೆ ಟಾಮ್ ಕ್ರೂಸ್ ಹಾಗೂ ಅಮಿತಾಬ್ ಬಚ್ಚನ್ ಅವರಂತೆ ಆಗುವ ಆಸೆ ಇದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT