ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹೃತ ಹಡಗಿನ ಸಿಬ್ಬಂದಿ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಸೋಮಾಲಿಯಾ ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟಿದ್ದ ಈಜಿಪ್ಟ್‌ನ ವ್ಯಾಪಾರಿ ಹಡಗು ಎಂವಿ ಸೂಯೆಜ್‌ನಲ್ಲಿದ್ದ ಆರು ಮಂದಿ ಭಾರತೀಯರೂ ಸೇರಿದಂತೆ 22 ಸಿಬ್ಬಂದಿ ಜೂನ್ 20 (ಸೋಮವಾರ)ರ ವೇಳೆಗೆ ತಮ್ಮ ತಮ್ಮ ದೇಶಗಳಿಗೆ ಹಿಂತಿರುಗುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ಮಾನವ ಹಕ್ಕುಗಳ ಕಾರ್ಯಕರ್ತ ಅನ್ಸರ್ ಬರ್ನಿ ತಿಳಿಸಿದ್ದಾರೆ.

ಹತ್ತು ತಿಂಗಳ ಹಿಂದೆ ಈ ಹಡಗನ್ನು ಸೋಮಾಲಿಯಾ ಕಡಲ್ಗಳ್ಳರು ಅಪಹರಿಸಿ ಅಪಾರ ಪ್ರಮಾಣದ ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಡಗು ಈಗ ಒಮನ್‌ನ ರಾಜಧಾನಿ ಸಲಲ್ಹಾ ಕಡೆಗೆ ಹೊರಟಿದ್ದು, ಶನಿವಾರ ನಸುಕಿನ ವೇಳೆಗೆ ಬಂದರನ್ನು ತಲುಪುವ ನಿರೀಕ್ಷೆ ಇದೆ ಎಂದವರು ಹೇಳಿದರು.

ಸಲಲ್ಹಾದಲ್ಲಿ ಅಲ್ಪ ಕಾಲದ ವಿರಾಮದ ನಂತರ ಆರು ಮಂದಿ ಭಾರತೀಯರು ಮತ್ತು ನಾಲ್ವರು ಪಾಕ್ ಪ್ರಜೆಗಳು ಮಸ್ಕಟ್‌ಗೆ ಪ್ರಯಾಣ ಬೆಳೆಸುವರು. ಮಸ್ಕಟ್‌ನಿಂದ ಎಲ್ಲರನ್ನೂ ಅವರವರ ದೇಶಗಳಿಗೆ ವಿಮಾನದ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಿರುವುದಾಗಿ ಕಡಲ್ಗಳ್ಳರಿಂದ ಎಲ್ಲರನ್ನು ಬಂಧಮುಕ್ತಗೊಳಿಸಲು ಶ್ರಮಿಸಿದ್ದ ಬರ್ನಿ ತಿಳಿಸಿದರು. ಹಾಗಾಗಿ ಇವರೆಲ್ಲರೂ ಸೋಮವಾರದ ವೇಳೆಗೆ ತಮ್ಮ ತಮ್ಮ ಊರುಗಳನ್ನು ತಲುಪುವರು ಎಂದೂ ಬರ್ನಿ ಅಭಯ ನೀಡಿದರು.

ಭಾರತದ ಆರು ಮಂದಿಯಲ್ಲದೇ ಈಜಿಪ್ಟ್‌ನ 11, ಪಾಕ್‌ನ ನಾಲ್ವರು ಹಾಗೂ ಶ್ರೀಲಂಕಾದ ಒಬ್ಬರನ್ನು ಕಡಲ್ಗಳ್ಳರು ಅಪಹರಿಸಿದ್ದರು. ಕಡಲ್ಗಳ್ಳರಿಗೆ 20 ಲಕ್ಷ ಡಾಲರ್ ಒತ್ತೆ ಹಣ ನೀಡಿದ ನಂತರ ಎಲ್ಲರನ್ನೂ ಈ ವಾರದ ಆದಿ ಭಾಗದಲ್ಲಿ ಬಿಡುಗಡೆ ಮಾಡಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT