ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ತಾಬ್‌ರ ಮಸ್ತಿ

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಪ್ಲೇಯರ್ಸ್‌', `1920 ಇವಿಲ್ ರಿಟರ್ನ್ಸ್' ಚಿತ್ರಗಳ ನಂತರ ಅಫ್ತಾಬ್ ಶಿವದಾಸಾನಿ ಅವರಿಗೆ ಅವಕಾಶಗಳಿರಲಿಲ್ಲ. ಇದೀಗ ಅರ್ಧಕ್ಕೆ ನಿಂತಿದ್ದ `ಗ್ರ್ಯಾಂಡ್‌ಮಸ್ತಿ' ಚಿತ್ರ ಆರಂಭವಾಗುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿಕೊಂಡಿದೆ.

`ನನಗೆ ಅವಕಾಶಗಳೇ ಇಲ್ಲ. ಬಂದರೂ ಬಹುತಾರಾಗಣದ ಚಿತ್ರಗಳಲ್ಲಿ ಮಾತ್ರ ಅವಕಾಶ ಬರುತ್ತಿದೆ. ಇದೀಗ ಇಂದ್ರಕುಮಾರ್ ನಿರ್ದೇಶನದ  `ಗ್ರ್ಯಾಂಡ್‌ಮಸ್ತಿ'ಯಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ಖುಷಿಯಾಗುತ್ತಿದೆ.

2004ರಲ್ಲಿ ತೆರೆ ಕಂಡಿದ್ದ `ಮಸ್ತಿ' ಚಿತ್ರದ ರೀಮೇಕ್ ಇದು. ವಿವೇಕ್ ಒಬೆರಾಯ್, ರಿತೇಶ್ ದೇಶಮುಖ್ ಅವರೊಂದಿಗೆ ನಾನು ಕಾಣಿಸಿಕೊಂಡಿದ್ದೆ. ಈಗಲೂ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ. ಇನ್ನಾದರೂ ನನ್ನ ವೃತ್ತಿಬದುಕು ಏರುಗತಿಯಲ್ಲಿ ಸಾಗಬಹುದು' ಎಂದು ಅಫ್ತಾಬ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT