ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ದುಲ್ ಬಸಿತ್ ಭಾರತದ ನೂತನ ಹೈಕಮೀಷನರ್

Last Updated 19 ಡಿಸೆಂಬರ್ 2013, 12:50 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ಅಬ್ದುಲ್ ಬಸಿತ್ ಅವರನ್ನು ಭಾರತದ ತನ್ನ ಹೈಕಮೀಷನರ್‌ ಆಗಿ ಪಾಕಿಸ್ತಾನ ಗುರುವಾರ ನೇಮಿಸಿದೆ.

55 ವರ್ಷ ವಯಸ್ಸಿನ ಬಸಿತ್ ಅವರ ಹೆಸರು ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ಕೇಳಿ ಬಂದಿತ್ತು. ಆದರೆ ಸರ್ಕಾರ ಇತ್ತೀಚಿಗೆ ಉದ್ದೇಶಿತ ನೇಮಕಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತ್ತು.

ಈ ಮೊದಲು ಪಾಕ್ ಸರ್ಕಾರ ಸಯ್ಯದ್ ಇಬ್ನೆ ಅಬ್ಬಾಸ್ ಅವರನ್ನು ಭಾರತದ ತನ್ನ ನೂತನ ರಾಜಧೂತರನ್ನಾಗಿ ನೇಮಿಸುವ ಗುರಿ ಹೊಂದಿತ್ತು. ಆದರೆ ನಿರ್ಣಾಯಕ ಹುದ್ದೆಗೆ ಅವರು ತುಂಬಾ ಕಿರಿಯರಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದರಿಂದ ಸರ್ಕಾರ ತನ್ನ ನಿಲುವು ಬದಲಿಸಿತು ಎನ್ನಲಾಗಿದೆ.

ಅಲ್ಲದೇ ಬಸಿತ್ ನೇಮಕ ನಿರ್ಧಾರ 10ದಿನಗಳ ಹಿಂದೆಯೇ ಆಗಿತ್ತು. ಆದರೆ ಗುರುವಾರವಷ್ಟೇ ಅಧಿಕೃತವಾಗಿ ಪ್ರಕಟಣೆ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT