ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳ ಪ್ರೀತಿ ಖುಷಿಯ ಕಣ್ಣೀರು ತರಿಸಿದೆ: ಸಚಿನ್

Last Updated 25 ಡಿಸೆಂಬರ್ 2012, 20:04 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಕದಿನ ಕ್ರಿಕೆಟ್ ಮಾದರಿಗೆ ಮೂರು ದಿನಗಳ ಹಿಂದೆ ನಿವೃತ್ತಿ ಪ್ರಕಟಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ತಮ್ಮ ಮೇಲೆ ಅಭಿಮಾನಿಗಳು ವ್ಯಕ್ತಪಡಿಸಿರುವ ಪ್ರೀತಿ, ಗೌರವಕ್ಕೆ ಮನಸೋತಿದ್ದಾರೆ. `ನೀವು ನನ್ನ ಮೇಲಿಟ್ಟಿರುವ ಪ್ರೀತಿಗೆ ಪ್ರತಿಕ್ರಿಯಿಸಲು ನನಗೆ ಪದಗಳೇ ಸಿಗುತ್ತಿಲ್ಲ' ಎಂದು ಲಿಟಲ್ ಚಾಂಪಿಯನ್ ಹೇಳಿದ್ದಾರೆ.

ನಿವೃತ್ತಿ ಪ್ರಕಟಿಸಿದ ನಂತರ ಮೊದಲ ಸಲ ಮೌನ ಮುರಿದಿರುವ ಸಚಿನ್ ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಅಭಿಮಾನಿಗಳ ಪ್ರೀತಿಗೆ ಈ ರೀತಿಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. `ಅಭಿಮಾನಿಗಳು ವ್ಯಕ್ತಪಡಿಸಿರುವ ಪ್ರೀತಿಗೆ ಹೇಗೆ ಉತ್ತರಿಸಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಅವರ ಪ್ರೀತಿ ನನ್ನಲ್ಲಿ ಖುಷಿಯ ಕಣ್ಣೀರು ತರಿಸಿದೆ' ಮುಂಬೈಕರ್ ಭಾವುಕರಾಗಿ  `ಟ್ವಿಟ್' ಮಾಡಿದ್ದಾರೆ. ಅವರು ಭಾನುವಾರ ಪ್ರವಾಸಿ ತಾಣ ಮಸ್ಸೂರಿಗೆ ತೆರಳಿದ್ದಾರೆ.

ಬ್ರಾಡ್ಮನ್‌ಗಿಂತ ಸಚಿನ್ ಶ್ರೇಷ್ಠ (ಕರಾಚಿ ವರದಿ): `ಕ್ರಿಕೆಟ್ ದಂತಕತೆ ಆಸ್ಟ್ರೇಲಿಯಾದ ಸರ್ ಡಾನ್ ಬ್ರಾಡ್ಮನ್‌ಗಿಂತ ತೆಂಡೂಲ್ಕರ್ ಶ್ರೇಷ್ಠ ಕ್ರಿಕೆಟಿಗ' ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮಹಮ್ಮದ್ ಹನೀಫ್ ಬಣ್ಣಿಸಿದ್ದಾರೆ.

`ಬ್ರಾಡ್ಮನ್ ಹಾಗೂ ಸಚಿನ್ ಇಬ್ಬರೂ  ಆಡುವುದನ್ನು ನೋಡಿದ್ದೇನೆ. ಜೀವನದಲ್ಲಿ ನಾನು ಕಂಡ ಬ್ಯಾಟ್ಸ್‌ಮನ್‌ಗಳಲ್ಲಿಯೇ ಸಚಿನ್ ಶ್ರೇಷ್ಠರು' ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT