ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಹೆಸರಲ್ಲಿ ಅವಹೇಳನ ಖಂಡನೀಯ

ಢುಂಢಿ ಪರ ಮಾತನಾಡುವವರನ್ನೂ ವಿರೋಧಿಸಬೇಕಿದೆ: ಚಿಮೂ
Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಹಿಂದೂ ಧಾರ್ಮಿಕ  ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಢುಂಢಿ ಕೃತಿಯನ್ನು ಮಾತ್ರವಲ್ಲ ಅದರ ಪರವಾಗಿ ಮಾತನಾಡುವವರನ್ನು ಕೂಡ ವಿರೋಧಿಸಬೇಕಿದೆ' ಎಂದು ಹಿರಿಯ ಸಂಶೋಧಕ ಡಾ.ಚಿದಾನಂದ ಮೂರ್ತಿ ಕರೆ ನೀಡಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಭೌತಿಕ ಭಕ್ತಿಯಂತೆ, ಭಾವನಾತ್ಮಕ ಭಕ್ತಿಯೂ ಮುಖ್ಯ. ಇದನ್ನು ಅವಮಾನಿಸುವವರು ಮೂರ್ಖರಾಗುತ್ತಾರೆ ವಿನಃ ವಿರೋಧಿಸುವವರಲ್ಲ' ಎಂದು ತಿರುಗೇಟು ನೀಡಿದರು.

`ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಧಾರ್ಮಿಕ ಮಹಾಪುರುಷರ ಬಗ್ಗೆ ಅವಹೇಳನ ಮಾಡಿ ಬರೆಯುವ ಪ್ರವೃತ್ತಿಗೆ ಕಡಿವಾಣ ಹಾಕುವ ಅಗತ್ಯವಿದೆ. ಅನ್ಯಧರ್ಮದ ಧಾರ್ಮಿಕ ನಂಬಿಕೆಗಳನ್ನು ಲೇವಡಿ ಮಾಡಿದ್ದರೆ, ಇಡೀ ದೇಶವೇ ಹೊತ್ತಿ ಉರಿಯುತ್ತಿತ್ತು. ಸಹಿಷ್ಣುತೆ ಹಿಂದೂ ಧರ್ಮದ ಜೀವಾಳ.  ಹಾಗೆಂದು ಹಿಂದೂಗಳು ಹೇಡಿಗಳಲ್ಲ' ಎಂದರು.

`ಢುಂಢಿ ಕೃತಿಯನ್ನು ಪ್ರಜ್ಞಾವಂತರು ವಿರೋಧಿಸಬೇಕು. ಪ್ರಗತಿಪರರು, ಜಾತ್ಯತೀತ ಸೋಗಿನಲ್ಲಿರುವವರ ನಿಜ ಬಣ್ಣವನ್ನು ಜನತೆ ಅರ್ಥಮಾಡಿಕೊಳ್ಳಬೇಕು. ಕೃತಿಗೆ ಹೇರಿರುವ ನಿಷೇಧ ಹೀಗೆ ಮುಂದುವರಿಯಲಿ, ಪ್ರಗತಿಪರರ ಒತ್ತಾಯಕ್ಕೆ ಮಣಿದು ಕೃತಿಯ ಮಾರಾಟಕ್ಕೆ ಅವಕಾಶ ದೊರೆತರೆ ಉಗ್ರ ಪ್ರತಿಭಟನೆ ಮಾಡಲಾಗುವುದು' ಎಂದು ಎಚ್ಚರಿಕೆ ನೀಡಿದರು.

`ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿರುವ ಯೋಗೇಶ್ ಮಾಸ್ಟರ್ ಅವರು ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಯಾರಿಂದಲೂ ವ್ಯಕ್ತಿ ಸ್ವಾತಂತ್ರ್ಯದ ಕುರಿತು ಪಾಠ ಕಲಿಯುವ ಅಗತ್ಯವಿಲ್ಲ. ಸಾರ್ವಜನಿಕರು ಸಿಡಿದೆದ್ದಾಗ ಮಾತ್ರ ಇಂತಹ ಕೃತಿಗಳು ಪ್ರಕಟವಾಗುವುದಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT