ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಒರತೆ:ಸ್ನೇಹದ ಬೆಲೆ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಇಬ್ಬರು ಆಪ್ತ ಸ್ನೇಹಿತರು ಮರಳಿನ ಮೇಲೆ ನಡೆದು ಹೋಗುತ್ತಿದ್ದರು. ಮಾತಿನ ನಡುವೆ ಮೊದಲನೆಯವನಿಗೆ ಕೋಪ ಬಂದು ಎರಡನೆಯವನ ಕೆನ್ನೆಗೆ ಬಾರಿಸಿದ. ಇದರಿಂದ ತೀವ್ರ ನೊಂದ ಎರಡನೆಯವನು `ನನ್ನ ಸ್ನೇಹಿತ ನನ್ನ ಕೆನ್ನೆಗೆ ಹೊಡೆದ~ ಎಂದು ಮರಳಿನ ಮೇಲೆ ಬರೆದ.

ಕೊಂಚ ದೂರ ಸಾಗಿದ ಬಳಿಕ ಎರಡನೆಯವನು ಕೆಸರಿನಲ್ಲಿ ಜಾರಿ ಬಿದ್ದು ಮುಳುಗಲಾರಂಭಿಸಿದ. ಮೊದಲನೆಯವನು ಕೂಡಲೇ ಕೈಹಿಡಿದು ಅವನನ್ನು ಮೇಲಕ್ಕೆಳೆದುಕೊಂಡ.

ಸುಧಾರಿಸಿಕೊಂಡ ಅವನು ಪಕ್ಕದಲ್ಲಿದ್ದ ಕಲ್ಲಿನ ಮೇಲೆ `ನನ್ನ ಸ್ನೇಹಿತ ಇಂದು ನನ್ನ ಪ್ರಾಣ ಉಳಿಸಿದ~ ಎಂದು ಬರೆದ. ಆಗ ಮೊದಲನೆಯವನು `ನಾನು ಹೊಡೆದಾಗ ಮರಳಿನ ಮೇಲೆ ಬರೆದೆ, ಕೆಸರಿನಿಂದ ಎತ್ತಿದಾಗ ಕಲ್ಲಿನ ಮೇಲೆ ಬರೆದದ್ದು ಯಾಕೆ?~ ಎಂದು ಕೇಳಿದ.

ಅದಕ್ಕೆ ಮೊದಲನೆಯವನು ಯಾರಾದರೂ ನಮಗೆ ನೋವುಂಟು ಮಾಡಿದಾಗ ಕ್ಷಮೆ ಎಂಬ ಗಾಳಿ ಅದನ್ನು ಅಳಿಸಿ ಹಾಕಲು ಸಾಧ್ಯವಾಗುವಂತೆ ಮರಳಿನಲ್ಲಿ ಬರೆಯಬೇಕು, ಅದೇ ಉಪಕಾರ ಮಾಡಿದಾಗ ಅಚ್ಚಳಿಯದೇ ನಿಲ್ಲುವ ಮನಸ್ಸೆಂಬ ಕಲ್ಲಿನ ಮೇಲೆ ಕೆತ್ತಬೇಕು ಎಂದು ಹೇಳಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT