ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ ಖೈದಾ ಉನ್ನತ ವ್ಯೂಹಕಾರ ಲಿಬಿ ಡ್ರೋಣ್ ದಾಳಿಗೆ ಬಲಿ?

Last Updated 5 ಜೂನ್ 2012, 9:15 IST
ಅಕ್ಷರ ಗಾತ್ರ

ಪೇಷಾವರ (ರಾಯಿಟರ್ಸ್): ಅಲ್ ಖೈದಾ ಸಂಘಟನೆಯ ಉನ್ನತ ವ್ಯೂಹಕಾರ ಅಬು ಯಾಹ್ಯಾ ಅಲ್-ಲಿಬಿಯನ್ನು ವಾಯವ್ಯ ಪಾಕಿಸ್ತಾನದಲ್ಲಿ ನಡೆದ ಡ್ರೋಣ್ ದಾಳಿಯಲ್ಲಿ ಬಹುತೇಕ ಹತ್ಯೆಗೈಯಲಾಗಿದೆ ಎಂದು ಪಾಕಿಸ್ತಾನಿ ಜಾಗೃತಾ ಅಧಿಕಾರಿಗಳು ಮಂಗಳವಾರ ಇಲ್ಲಿ ತಿಳಿಸಿದ್ದಾರೆ.

ಈತ ಅಯ್ಮಾನ್ ಅಲ್ ಜವಾಹಿರಿ ಬಳಿಕ ಸಂಘಟನೆಯ ನಿಪುಣ ವ್ಯೂಹಕಾರ ಹಾಗೂ ಸಂಘಟನೆಕಾರರಲ್ಲಿ ಒಬ್ಬನಾಗಿದ್ದ ಎಂದು ಹೇಳಲಾಗಿದೆ.

ಅಲ್ ಲಿಬಿ ಸಾವು ದೃಢಪಟ್ಟರೆ, 2011ರ ಮೇ ತಿಂಗಳಲ್ಲಿ ರಹಸ್ಯ ಕಾರ್ಯಾಚರಣೆಯಲ್ಲಿ ಅಮೆರಿಕದ ವಿಶೇಷ ಪಡೆಗಳು ಒಸಾಮಾ ಬಿನ್ ಲಾಡೆನ್ ಹತ್ಯೆಗೈದ ನಂತರ  ಅಲ್ ಖೈದಾ ಸಂಘಟನೆಗೆ ಬಿದ್ದ ಬಹುದೊಡ್ಡ ಹೊಡೆತ ಇದಾಗುತ್ತದೆ.

ಹಿಂದಿನ ಡ್ರೋಣ್ ದಾಳಿಗಳಲ್ಲಿ ಪಾರಾಗಿದ್ದ ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದು ಧಾರ್ಮಿಕ ಮುಖಂಡನಾಗಿದ್ದ ಲಿಬಿಯನ್ನು ಗುರಿಯಾಗಿಟ್ಟುಕೊಂಡೇ ಉತ್ತರ ವಜೀರಿಸ್ತಾನ್ ಗುಡ್ಡಗಾಡು ಪ್ರದೇಶದಲ್ಲಿ ಸೋಮವಾರ ದಾಳಿ ನಡೆಸಲಾಗಿತ್ತು.

ಮೊಹಮ್ಮದ್ ಹಸನ್ ಖೈದ್ ಎಂಬ ನಿಜನಾಮಧೇಯದ ಲಿಬಿ, ಲಾಡೆನ್ ಸಾವಿನ ಬಳಿಕ ಅಲ್ ಖೈದಾ ಸಂಘಟನೆ ನೇತೃತ್ವ ವಹಿಸಿದ್ದ ಈಜಿಪ್ಟಿನ ಮಾಜಿ ವೈದ್ಯ ಜವಾಹಿರಿಯ ನಿಕಟವರ್ತಿಯಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT