ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಗುಂಪಿಗೆ ಸೇರಿಸಿ: ಜೈನರ ಆಗ್ರಹ

Last Updated 19 ಡಿಸೆಂಬರ್ 2012, 8:53 IST
ಅಕ್ಷರ ಗಾತ್ರ

ರಾಯಬಾಗ: ಜೈನ ಸಮುದಾಯವನ್ನು ರಾಜ್ಯದಲ್ಲಿ ಅಲ್ಪಸಂಖ್ಯಾತ ಎಂದು ಇರುವಂತೆ ರಾಷ್ಟ್ರಮಟ್ಟದಲ್ಲೂ ಜೈನ ಸಮುದಾಯವನ್ನು ಅಲ್ಪಸಂಖ್ಯಾತರ ಗುಂಪಿಗೆ ಸೇರಿಸುವಂತೆ ಪಟ್ಟಣದಲ್ಲಿ ಮಂಗಳವಾರ ತಾಲ್ಲೂಕಿನ ಜೈನ    ಸಮುದಾಯದವರು ಜೈನ ಬಸದಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಸಮುದಾಯದ ಮುಖಂಡರಾದ ಡಿ.ಸಿ.ಸದಲಗಿ, ಶಾಂತಿನಾಥ ಶೆಟ್ಟಿ. ಪಾರೀಸ ಉಗಾರೆ, ಪ್ರವೀಣ ಹುಕ್ಕೇರಿ ನೇತೃತ್ವದಲ್ಲಿ ತಹಶೀಲದಾರ ಶಿವಾನಂದ ಸಾಗರ  ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಅರ್ಪಿಸಿ, 1992ರ ಜನಗಣತಿ ಆಧಾರದ ಮೇಲೆ ಜೈನರನ್ನು ಸಹ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸಬೇಕಿತ್ತು.

ಸರ್ಕಾರ ಹಾಗೆ ಮಾಡದೆ ಗುರುತರ ಅನ್ಯಾಯ ಮಾಡಿದೆ ಎಂದು ತಾಲ್ಲೂಕು ಜೈನ ಸಮುದಾಯದ ಅಧ್ಯಕ್ಷ ಡಿ.ಸಿ.ಸದಲಗಿ ಮನವಿ ಅರ್ಪಿಸಿ ಮಾತನಾಡಿದರು. ಜೈನ ಸಮುದಾಯದ ಸಮಸ್ಯೆಗಳನ್ನು ಸರ್ಕಾರ ಅರಿತು ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ ರಂಗದಲ್ಲಿ ಬೆಳೆಯುವ ಅವಕಾಶ ಕಲ್ಪಿಸಿಕೊಡುವಂತೆ ಮನವಿ    ಮಾಡಿದರು.

ಪಾರೀಸ್ ಉಗಾರೆ, ಜಿನೇಂದ್ರ ಖೆಮಲಾಪುರೆ, ಅಣ್ಣಾಸಾಹೇಬ ಖೆಮಲಾಪುರೆ, ಪ್ರವೀಣ ಹುಕ್ಕೇರಿ, ಶಾಂತಿನಾಥ ಶೆಟ್ಟಿ ಜಿನದತ್ತ ಶೆಟ್ಟಿ, ಎಂ.ಕೆ.ಖೊಂಬಾರೆ, ಕುಮಾರ ಬಾಬನ್ನವರ, ಅಣ್ಣಾಸಾಬ ಕೋನೆ, ಕುಮಾರ ಬ್ಯಾಡಗಿ, ಸುಕುಮಾರ ಪಾಟೀಲ, ಈರಗೌಡ ಪಾಟೀಲ, ಮಹಾವೀರ ಪಾಟೀಲ, ಶ್ರೀಮಂತ ಬಾಬನ್ನವರ, ಶಂಕರ ದಡ್ಡಿ ಸೇರಿದಂತೆ ತಾಲ್ಲೂಕಿನ ಜೈನ ಸಮುದಾಯದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT