ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶೋಕದಲ್ಲಿ ಡಿಸೈನರ್ ಮೇಳ

Last Updated 9 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಫ್ಯಾಷನ್ ಎಂದರೆ ಹಾಗೇ. ಇಂದು ಧರಿಸಿದ ಬಟ್ಟೆ ನಾಳೆ ಹೊಸದೊಂದು ವಿನ್ಯಾಸ ಪಡೆಯುತ್ತದೆ. ಕ್ರಿಯಾಶೀಲರ ಕೈಚಳಕದಲ್ಲಿ ಹೊಸ ಗೆಟಪ್ಪಿನೊಂದಿಗೆ ಅದು ಮಾರುಕಟ್ಟೆಗೆ ಲಗ್ಗೆಯಿಡುತ್ತದೆ.

ಕೆಲವರಿಗೆ ಇದೊಂದು ಹವ್ಯಾಸ. ಈ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡು ಸಾಧನೆ ಮಾಡಿದವರೂ ಬಹಳ ಮಂದಿ.  ಇದೀಗ ನಗರದ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ಅಂತಹುದೊಂದು ತಂಡ ವಸ್ತ್ರ, ವಸ್ತು ವಿನ್ಯಾಸದ ಪ್ರದರ್ಶನಕ್ಕೆ ಮುಂದಾಗಿದೆ.

ಬಗೆಬಗೆಯ ಕುರ್ತಾಗಳು, ಸಲ್ವಾರ್, ಹಲವು ನಮೂನೆಯ ಆಭರಣ, ಕೈಚೀಲ ಹೀಗೆ ಫ್ಯಾಷನ್‌ಪ್ರಿಯ ಮಹಿಳೆಯರಿಗೆ ಬೇಕುಬೇಕೆನಿಸುವ ಪ್ರತಿಯೊಂದೂ ಒಂದೇ ಸೂರಿನಡಿ ಲಭ್ಯವಾದರೆ ಅವರ ಶಾಪಿಂಗ್ ಶ್ರಮವನ್ನು ಬಹುಪಾಲು ಸರಳಗೊಳಿಸಿದಂತೆ ಎಂಬ ದೂರದೃಷ್ಟಿ ಚಿಂತನೆಯನ್ನು ಕಾರ್ಯರೂಪಕ್ಕೆ ಇಳಿಸಿದವರು ಕೃಪಾ ಸುಮಂತ್.

`ನನ್ನೂರು ಮೈಸೂರು. ಮೊದಲಿನಿಂದಲೂ ನನಗೆ ಫ್ಯಾಷನ್ ಮೇಲೆ ಒಂದು ರೀತಿಯ ಮೋಹ. ಅದರಲ್ಲಿ ಏನಾದರೂ ವಿಭಿನ್ನವಾಗಿರುವುದನ್ನು ನೋಡುವುದೇ ಚೆನ್ನಾಗಿರುತ್ತದೆ. ಫ್ಯಾಷನ್ ಡಿಸೈನರ್ ಆಗಿರುವ ನನಗೆ ಜನರ ಅಭಿರುಚಿಯ ಬಗ್ಗೆ ಅರಿವಿತ್ತು. ಹೊಸತನ್ನು ಮಾಡಬೇಕು ಎಂಬ ಉದ್ದೇಶದಿಂದ ಎಲ್ಲಾ ಫ್ಯಾಷನ್ ಡಿಸೈನರ್‌ಗಳನ್ನು ಒಂದು ಕಡೆ ಸೇರಿಸಿ ಅವರು ಸಿದ್ಧಪಡಿಸಿದ ವಸ್ತು/ಉತ್ಪನ್ನಗಳ ಪ್ರದರ್ಶನ ಆಯೋಜಿಸಿದ್ದೇನೆ~ ಎಂದು ಹೇಳುತ್ತಾರೆ ಕೃಪಾ.

ಲಲಿತ್ ಅಶೋಕ್‌ದಲ್ಲಿ ಇಂದಿನಿಂದ ನಡೆಯುವ ಈ `ಮೆಗಾ ಡಿಸೈನರ್ ಮೇಳ~ದಲ್ಲಿ ಕೋಲ್ಕತ್ತಾ, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್‌ನ ಅತ್ಯುತ್ತಮ ಡಿಸೈನರ್‌ಗಳು ಪಾಲ್ಗೊಳ್ಳಲಿದ್ದಾರೆ. 

ಹಬ್ಬ ಹರಿದಿನಗಳು ಬಂದಾಗ ಜನ ಹೊಸ ಉಡುಪುಗಳಿಗಾಗಿ ಮಾರುಕಟ್ಟೆಯಲ್ಲಿ ಅಲೆಯುತ್ತಾರೆ. ಹಾಗಾಗಿ ಈ ಬಾರಿ ಗೌರಿ ಗಣೇಶ ಹಬ್ಬಗಳಲ್ಲಿ ತೊಡಬಹುದಾದದ ಭರ್ಜರಿ ಉಡುಗೆಗಳೂ ಇಲ್ಲಿ ಲಭ್ಯ. ಕಾಲಕ್ಕೆ ತಕ್ಕಂತೆ ಫ್ಯಾಷನ್ ಬದಲಾಗುತ್ತದೆ. ಈ ಬಾರಿ ಬಂದ ವಿನ್ಯಾಸ ಇನ್ನೊಂದು ಬಾರಿ ಬರುವುದಿಲ್ಲ. ಅದರಂತೆ ನಾವು ಬದಲಾದರೆ ಮಾತ್ರ ಜನ ಇಷ್ಟಪಡುತ್ತಾರೆ~ ಎನ್ನುತ್ತಾರೆ ಕೃಪಾ.

ದೆಹಲಿಯ ರೈನಾ ಸೂರಿ ಅವರ ಕೈಯಲ್ಲಿ ತಯಾರಾದ ಫಾರ್ಮಲ್ ಕಟನ್ ಮತ್ತು ನಯವಾದ ತೆಳು ರೇಷ್ಮೆಯಂಥ ಸಲ್ವಾರ್ ಕಮೀಜ್‌ಗಳು, ಕುರ್ತಿಗಳು, ಸೀರೆಗಳು, ಬೆಂಗಳೂರಿನ ಫ್ರ್ಯಾಂಗಿ ದೇಸಿ ಅವರ ಸಾಂಪ್ರದಾಯಿಕ ಡ್ರೆಸ್ ಮೆಟಿರಿಯಲ್‌ಗಳೂ ಇಲ್ಲಿವೆ. ಜತೆಗೆ ವಿಭಿನ್ನ ಶೈಲಿಯ ಆಭರಣಗಳು ಕೂಡ ಎಲ್ಲರ ಮನ ಸೆಳೆಯಲಿದೆ.

ಶುಕ್ರವಾರ ಮತ್ತು ಶನಿವಾರ ನಡೆಯುವ ಈ ಮೇಳವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ನಟಿ ಶ್ವೇತಾ ಉದ್ಘಾಟಿಸಲಿದ್ದಾರೆ. ಪ್ರವೇಶ ಮುಕ್ತ. ಸಮಯ: ಬೆಳಿಗ್ಗೆ 10.30ರಿಂದ ಸಂಜೆ 8.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT