ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೋ ಎಕ್ಸ್‌ಪೊ: ಅನಾವರಣಗೊಂಡ ವಾಹನ ಲೋಕದ ವಿಸ್ಮಯ

Last Updated 20 ಅಕ್ಟೋಬರ್ 2012, 4:05 IST
ಅಕ್ಷರ ಗಾತ್ರ

ಮಂಗಳೂರು: ಒಂದು ಕಾಲದಲ್ಲಿ ಶ್ರೀಮಂತಿಕೆಯ ಪ್ರತೀಕದಂತಿದ್ದ ವಿಂಟೇಜ್ ಕಾರುಗಳು, ಮೊಪೆಡ್, ಯಝ್ದಿ, ಜಾವ ಬೈಕುಗಳು..

ಇಂದಿನ ಕಾಲದ ವಿನೂತನ ಸೌಲಭ್ಯಗಳುಳ್ಳ ವಿದೇಶಿ- ಸ್ವದೇಶಿ ನಿರ್ಮಿತ ಅತ್ಯಾಧುನಿಕ ಐಷಾರಾಮಿ ಕಾರುಗಳು, ಸೂಪರ್ ಬೈಕುಗಳು ಇವೆಲ್ಲವೂ ಜೊತೆಯಾಗಿಯೇ ಮಂಗಳೂರಿನ ರಾಜಬೀದಿಯಲ್ಲಿ ಸಾಗುತ್ತಿದ್ದರೆ ರಸ್ತೆಯ ಇಕ್ಕೆಲಗಳಲ್ಲಿ ಇದ್ದವರು ಬೆರಗು ಗಣ್ಣಿನಿಂದ ನೋಡುತ್ತಿದ್ದರು.

ಮಂಗಳೂರಿನಲ್ಲಿ ಜನತೆಗೆ ಪ್ರಥಮ ಬಾರಿಗೆ ಇಂತಹ ಅಪೂರ್ವ ಅವಕಾಶ ಒದಗಿದ್ದು ಶುಕ್ರವಾರ. ಅಡ್ಯಾರಿನಲ್ಲಿರುವ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳ `ಫ್ಲೇಮ್~ ಒಕ್ಕೂಟವು `ವೀಲ್ಸ್-2012~ ಎಂಬ ಹೆಸರಿನಲ್ಲಿ `ಆಟೋ ಎಕ್ಸ್‌ಪೋ~ ವಾಹನ ಪ್ರದರ್ಶನ ಮೇಳವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಿತ್ತು. ಇದಕ್ಕೂ ಮೊದಲು ಮಹಾವೀರ ವೃತ್ತ (ಪಂಪ್‌ವೆಲ್) ದಿಂದ ಅಡ್ಯಾರ್‌ನಲ್ಲಿರುವ ಕಾಲೇಜಿನವರೆಗೆ ಪ್ರದರ್ಶನದಲ್ಲಿದ್ದ ವಾಹನಗಳು ಜಾಥದಲ್ಲಿ ತೆರಳಿದವು.

ವಿಶಾಲವಾದ ಪ್ರಾಂಗಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗುವಂತೆ ಎಲ್ಲಾ ವಾಹನಗಳಿಗೂ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರದರ್ಶನಕ್ಕೆ ಕಲಶ ತಿಲಕವಿಟ್ಟಂತೆ ಧರ್ಮಸ್ಥಳದ ಮಂಜುಷಾ ವಸ್ತು ಸಂಗ್ರಹಾಲಯದಿಂದ ಬಂದಿದ್ದ 1951ರ ಅಮೆರಿಕ ನಿರ್ಮಿತ ಋ್ಗಿಓ5970 ಅಂಬಾಸಿಡರ್ ಶೈಲಿಯನ್ನು ಹೋಲುವ ನೀಲಿ ಬಣ್ಣದ ಕಾರು ವಾಹನಾಸಕ್ತರನ್ನು ಸ್ವಾಗತಿಸಲು ನಿಂತತಿತ್ತು.

ದಿಲೀಪ್ ಕುಮಾರ್ ಅವರ ಸಂಗ್ರಹದಲ್ಲಿದ್ದ 1951ರ ಬ್ರಿಟಿಷ್ ನಿರ್ಮಿತ ಮ್ಯಾನುವಲ್ (ಈಗಿನ ಬೈಕುಗಳಲ್ಲಿರುವಂತೆ) ಗೇರ್ ಸೌಲಭ್ಯವನ್ನು ಹೊಂದಿರುವ ಬ್ಯೆಸಿಕಲ್‌ನಿಂದ ಆರಂಭಗೊಳ್ಳುವ ಪ್ರದರ್ಶನದ ವಿಸ್ಮಯಗಳು ವೀಕ್ಷಕರಿಗೆ ಒಂದೊಂದಾಗಿ ತೆರೆದುಕೊಂಡವು.
 
1976ರ `ಸುವೆಜ~, 1989ರ ಸ್ವದೇಶಿ ನಿರ್ಮಿತ ಐಎನ್‌ಎಸ್ ಎಕ್ಸ್‌ಪ್ರೆಸ್, 1956ರ ಲ್ಯಾನ್‌ಬ್ರೀತ್-48, 1991ರ `ಎನ್‌ಫೀಲ್ಡ್ ಮಫ~ ಮೊಪೆಡ್‌ಗಳು ಅಂದಿನ ಕಾಲದ ಯುವಕರ ಕ್ರ್ೇ ಅನ್ನು ತೆರೆದಿಟ್ಟಿತು. ಮುಂದೆ ಇತ್ತೀಚಿನ ವರ್ಷಗಳವರೆಗೂ ರಸ್ತೆಯ ರಾಜನಾಗಿ ಮೆರೆದಿದ್ದ ಜೆಕೊಸ್ಲೊವಾಕಿಯಾ ನಿರ್ಮಿತ ಯಝ್ದಿ, ಜಾವಾ ಬೈಕುಗಳು ಬೈಕ್ ರೈಡಿಂಗ್‌ನ ನಿಜವಾದ ಆನಂದವನ್ನು ಆಸ್ವಾದಿಸಲು ಯುವಕರನ್ನು ಕೈಬೀಸಿ ಕರೆದಂತಿತ್ತು.

ಜೆಕೊಸ್ಲೊವಾಕಿಯಾ ದೇಶದ ಜಾವಾ ಕಂಪನಿಯು ಜಾವಾ ಬೈಕುಗಳನ್ನು ನಿರ್ಮಿಸಿ ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿ, ಅಭೂತಪೂರ್ವ ಯಶಸ್ಸನ್ನು ಗಳಿಸಿತ್ತು.  1962 ರಲ್ಲಿ ಜಾವಾ ಕಂಪೆನಿಯು ಭಾರತದಲ್ಲಿ ನಿರ್ಮಾಣ ಕೇಂದ್ರವನ್ನು ಸ್ಥಾಪಿಸಿತು. ವರ್ಷಗಳುರುಳಿದಂತೆ ಜಾವಾ ಯಝ್ದಿಯಾಗಿ ತನ್ನ ಹೆಸರನ್ನು ಬದಲಾಯಿಸಿತು.

ಜಾವಾದ 1950, 54ರಲ್ಲಿ ಇಂಗ್ಲೆಂಡ್‌ನಲ್ಲಿ ನಿರ್ಮಿತವಾದ ಬಿಎಸ್‌ಎ ಬ್ಯಾಂಟಮ್ ಮಾಡೆಲ್‌ಗಳು ಪ್ರದರ್ಶನದಲ್ಲಿದ್ದವು. ಮತ್ತೊಂದೆಡೆ ತದ್ವಿರುದ್ಧ ಎನ್ನುವಂತೆ ಈಗಿನ ಯುವಕರ ಕನಸಿನ ಬೈಕ್‌ಗಳಾದ ಸುಝುಕಿಯ ನಿಂಜ, ಜಿಎಸ್‌ಎಕ್ಸ್ 1500, ಧೂಮ್ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದ ಹಯಬುಝ, ಯಮಾಹಾದ ಅತ್ಯಾಕರ್ಷಕ ನೋಟದ ್ಕ1, ಬೈಕುಗಳು ಗಮನ ಸೆಳೆದವು.

ಪ್ರಾಂಗಣದ ಮತ್ತೊಂದು ಬದಿಯಲ್ಲಿ ಕಾರುಗಳ ವಿಶಾಲ ಲೋಕವೊಂದು ವಿಸ್ಮಯ ಸೃಷ್ಟಿಸಿತ್ತು. 1951ರ ಇಂಗ್ಲೆಂಡ್ ನಿರ್ಮಿತ `ಮೊರಿಸ್~ ಕಂಪನಿಯ ಮೈನರ್-1000, ಫೋರ್ಡ್ ಕಂಪನಿಯ ಆರಂಭದ ಕಾಲದ ಜೀಪ್, ಭಾರತದ ಅಭಿಮಾನವಾಗಿದ್ದ, ಒಂದು ಕಾಲದ ಶ್ರೀಮಂತಿಕೆಯ ಪ್ರತೀಕವಾಗಿದ್ದ ಹಿಂದೂಸ್ತಾನ್ ಮೋಟಾರ್ಸ್‌ನ  ಕಾಂಟೆಸ್ಸಾ ಕಾರು, ಫಿಯಟ್ ಕಂಪನಿಯ ಹಳೆಯ ಕಾರನ್ನು ಆಧುನೀಕರಣಗೊಳಿಸಿ ಹೊಸತನದ ಸ್ಪರ್ಶ ನೀಡಿ ಇಂದಿನ ಪೀಳಿಗೆಯ ಕಾರನ್ನಾಗಿಸಿದ ಪರಿ ನೋಡಿ ವೀಕ್ಷಕರು ಬೆರಗಾದರು.

ಮುಂದೆ ಜಗತ್ತಿನ ಐಷಾರಾಮಿ ಕಾರಿನ ಭಾಷೆಯೆಂದೆ ಪರಿಗಣಿತವಾದ ಫಿರಾರೈ, ಮರ್ಸಿಡಿಸ್ ಬೆಂ್, ಆಡಿ ಕಂಪನಿಯ ಇತ್ತೀಚೆಗಿನ ವಿನ್ಯಾಸದ ಕಾರುಗಳು ಆಲ್ಟೊ ಕಾರಿನ ಮಾಲಕನನ್ನು ಮುಖ ಮುಚ್ಚಿಕೊಳ್ಳುವಂತೆ ಮಾಡಿತ್ತು. ಒಟ್ಟಿನಲ್ಲಿ `ಹಿಂದಿನ ಕಾಲದಲ್ಲಿ ಮೆರೆದಾಡಿದ್ದವರನ್ನು, ಈಗ ಮೆರೆದಾಡುತ್ತಿರುವವರನ್ನು, ಮುಂದೆ ಮೆರೆದಾಡಲಿರುವವರನ್ನು ಒಂದೇ ಸೂರಿನಡಿ ತಂದ ಸಹ್ಯಾದ್ರಿ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ `ಫ್ಲೇಮ್~ ಒಕ್ಕೂಟದ `ವೀಲ್ಸ್-2012~  `ಆಟೋ ಎಕ್ಸ್‌ಪೋ~ಗೆ ವೀಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದ್ದು ವಿದ್ಯಾರ್ಥಿಗಳ ಪ್ರಯತ್ನವನ್ನು ಸಾರ್ಥಕಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT