ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡೋಣು ಬಾರ

Last Updated 11 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಮಕ್ಕಳಿಗೆ ಆಡಲು ಅಂಗಳವಿಲ್ಲ. ಹೆಂಗಳೆಯರು ರಂಗೋಲಿ ಬಿಡಿಸಲು ಅಂಗಳವಿಲ್ಲ. ಹಿರಿಯರು ಕುಳಿತು ಹರಟಲು ಅಂಗಳವಿಲ್ಲ. ತಾರು ರಸ್ತೆಯನ್ನೇ ಅಂಗಳ ಮಾಡಿಕೊಂಡ ಚಿಣ್ಣರು.

ಇಂಥ ಮಕ್ಕಳಿಗೊಂದು ಆಟದ ಲೋಕ ಕಲ್ಪಿಸಲು ಕೆಎಂಡಬ್ಲ್ಯೂ ವಿದ್ಯಾನಿಕೇತನ ಮುಂದಾಗಿದೆ.  ಭಾನುವಾರ ಮಹಾಲಕ್ಷ್ಮೀಪುರದಲ್ಲಿ ‘ಆಡೋಣು ಬಾರ’ ಎಂಬ ವಿಶಿಷ್ಟ ಆಟಗಳ ಮೇಳ ಆಯೋಜಿಸಿದೆ.

ನಗರದ ಮಕ್ಕಳಿಗೆ ಪರಿಚಯವೇ ಇಲ್ಲದ ಮರೆತುಹೋದ ಹಳ್ಳಿಯ ಆಟಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ಒಳಾಂಗಣ ಆಟದಲ್ಲಿ ಮರಳ ಮನೆ ಆಟ, ಬಳೆಚೂರು ಆಟ, ಗೊರವಯ್ಯನ ಆಟ, ಹಳಗುಣಿ ಮನೆಯಾಟ, ಚೌಕಾಬಾರ, ಮಣ್ಣುಗೊಂಬೆ, ಅಜ್ಜಿ ಕಥೆ, ಕಾಗದ ದೋಣಿ ಆಟ, ಕಳ್ಳ ಪೊಲೀಸ್, ಹಾವು ಏಣಿ ಆಟ, ಒಗಟು, ಅವಲಕ್ಕಿ ಬುವಲಕ್ಕಿ ಆಟ, ರಿಂಗ್ ಆಟ, ಬಿಲ್ಲು ಆಟ.. ಇತ್ಯಾದಿ ಇರುತ್ತವೆ.

ಸ್ಥಳ: 12ನೇ ಅಡ್ಡ ರಸ್ತೆ, 4ನೇ ಮುಖ್ಯ ರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ಮಹಾಲಕ್ಷ್ಮಿಪುರಂ. ಬೆಳಿಗ್ಗೆ 10ರಿಂದ. ಮಾಹಿತಿಗೆ : 2349 3451

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT