ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿವಾಸಿಗಳಿಗೆ ಜಮೀನು ನೀಡಲು ಒತ್ತಾಯ

Last Updated 14 ಡಿಸೆಂಬರ್ 2013, 8:13 IST
ಅಕ್ಷರ ಗಾತ್ರ

ರಾಮನಗರ: ಅರಣ್ಯ ಹಕ್ಕು ಕಾಯ್ದೆ 2006ರ ಅನ್ವಯ ಜಿಲ್ಲೆಯ ಆದಿವಾಸಿಗಳಿಗೆ ತಲಾ ಎರಡು ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶ್ರೀನಿವಾಸ್ ಆಗ್ರಹಿ ಸಿದರು. ನಗರದ ಸ್ಫೂರ್ತಿ ಭವನದಲ್ಲಿ ಕರ್ನಾ ಟಕ ಪ್ರಾಂತ ರೈತ ಮಂಗಳವಾರ ಹಮ್ಮಿ ಕೊಂಡಿದ್ದ ಆದಿವಾಸಿ ಬುಡಕಟ್ಟು ಜನರ 2ನೇ ರಾಜ್ಯ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ, ಹಲವು ವರ್ಷಗಳಿಂದ ಆದಿವಾಸಿ ಕುಟುಂಬಗಳು ಬೇಸಾಯ ಮಾಡುತ್ತಾ ಬಂದಿವೆ. ಆದ್ದರಿಂದ ಈ ಕುಟುಂಬಗಳಿಗೆ ಸಾಗು ವಳಿ ಚೀಟಿ ನೀಡುವ ಮೂಲಕ ಭೂಮಿ ಪರಭಾರೆ ಮಾಡ ಬೇಕು ಎಂದು  ಒತ್ತಾಯಿಸಿದರು. ಜಿಲ್ಲೆಯಲ್ಲಿ ಸುಮಾರು 155 ಗ್ರಾಮಗಳಲ್ಲಿ ಆದಿವಾಸಿ ಜನ ವಾಸಿಸುತ್ತಿದ್ದಾರೆ. ರಾಮನಗರ ತಾಲ್ಲೂಕಿನಲ್ಲಿ 22, ಕನಕಪುರದಲ್ಲಿ 50, ಮಾಗಡಿ 64 ಹಾಗೂ ಚನ್ನಪಟ್ಟಣ ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಹೆಚ್ಚು ಬುಡಕಟ್ಟು ಜನರು ವಾಸಿಸುತ್ತಿದ್ದಾರೆ ಎಂದರು.

ಸುಮಾರು 75 ವರ್ಷ ಗಳಿಂದ ಸ್ಥಳೀಯವಾಗಿ ವಾಸ ಮಾಡುತ್ತಿರುವ ಬುಡಕಟ್ಟು ಕುಟುಂಬಗಳಿಗೆ ಮಾತ್ರ ಜಮೀನು ನೀಡಲಾಗುತ್ತದೆ ಎಂದು ಹೇಳುತ್ತಿದೆ. ಇದು ಅರಣ್ಯ ಇಲಾ ಖೆಯ ಜನವಿರೋಧಿ ಕ್ರಮವಾಗಿದ್ದು, ಸರ್ಕಾರ ಕೂಡಲೇ ಇದನ್ನು ಕೈಬಿಡಬೇಕು ಎಂದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮ ನ್ವಯ ಸಮಿತಿ ರಾಜ್ಯ ಸಂಚಾಲಯ ಎಸ್. ವೈ.ಗುರುಶಾಂತ್,  ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್.ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT