ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್: ಹೊಸ ತಂತ್ರಾಂಶ ಬಳಕೆಗೆ ಮುಕ್ತ

Last Updated 6 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಆಧಾರ್~ ಗುರುತಿನ ಚೀಟಿಯನ್ನು ನಾಗರಿಕರಿಗೆ ತ್ವರಿತವಾಗಿ ನೀಡುವ ಉದ್ದೇಶದಿಂದ ಅಭಿವೃದ್ಧಿಪಡಿಸಿರುವ ಹೊಸ ತಂತ್ರಾಂಶ ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಮುಕ್ತವಾಗಲಿದೆ.

ಇತ್ತೀಚೆಗಷ್ಟೇ ಈ ತಂತ್ರಾಂಶದ ಪರೀಕ್ಷಾರ್ಥ ಬಳಕೆಗೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಚಾಲನೆ ನೀಡಿತ್ತು. ನಾಗರಿಕರು ನೀಡುವ ಮಾಹಿತಿಯನ್ನು ಹೆಚ್ಚು ನಿಖರವಾಗಿ ದಾಖಲಿಸುವ ಹಾಗೂ ಗುಪ್ತವಾಗಿ ಸಂಗ್ರಹಿಸಲೂ ನೂತನ ತಂತ್ರಾಂಶ ಸಹಕಾರಿಯಾಗಲಿದೆ.

`ತಂತ್ರಾಂಶದ ಪರೀಕ್ಷಾ ಹಂತದಲ್ಲಿ ಸಹಜವಾಗಿಯೇ ಕೆಲವು ದೋಷಗಳು ಕಂಡುಬಂದಿದ್ದವು. ಅವುಗಳನ್ನು ಸರಿಪಡಿಸಲಾಗಿದೆ. ತಂತ್ರಾಂಶವನ್ನು ಸೋಮವಾರ ದೇಶದಾದ್ಯಂತ ಬಿಡುಗಡೆ ಮಾಡುತ್ತೇವೆ. ಹಳೆಯ ತಂತ್ರಾಂಶ ಬಳಸಿಕೊಂಡು ಇದುವರೆಗೆ ಬಯೋಮೆಟ್ರಿಕ್ ಮತ್ತಿತರ ಮಾಹಿತಿ ಪಡೆಯುತ್ತಿದ್ದ ರಾಜ್ಯಗಳು ಇನ್ನು ಮುಂದೆ ನೂತನ ತಂತ್ರಾಂಶವನ್ನು ಬಳಸಲಿವೆ~ ಎಂದು ಯುಐಡಿಎಐನ ಉಪ ಮಹಾನಿರ್ದೇಶಕ ಅಶೋಕ ದಳವಾಯಿ `ಪ್ರಜಾವಾಣಿ~ಗೆ ತಿಳಿಸಿದರು.

ಕೇರಳ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳು ಹೊಸ ತಂತ್ರಾಂಶವನ್ನು ಸೋಮವಾರದಿಂದಲೇ ಬಳಸಿಕೊಳ್ಳಲಿವೆ. ಆದರೆ, ಕರ್ನಾಟಕದಲ್ಲಿ `ಆಧಾರ್~ ಗುರುತಿನ ಚೀಟಿ ನೋಂದಣಿ ಕಾರ್ಯ ಯಾವಾಗ ಆರಂಭವಾಗುತ್ತದೆ ಎಂಬುದನ್ನು ರಾಜ್ಯ ಸರ್ಕಾರ ನಿರ್ಧರಿಸುತ್ತದೆ ಎಂದರು.

ಈವರೆಗೆ 17.69 ಕೋಟಿ `ಆಧಾರ್~ ಸಂಖ್ಯೆಗಳನ್ನು ಸಿದ್ಧಪಡಿಸಲಾಗಿದೆ. ಆದರೆ, ಕಾರಣಾಂತರಗಳಿಂದ ಕೆಲವರಿಗೆ `ಆಧಾರ್~ ಚೀಟಿ ಇನ್ನೂ ದೊರೆತಿಲ್ಲ. ಆದಷ್ಟು ಶೀಘ್ರ ಅವರಿಗೆ ಗುರುತಿನ ಚೀಟಿ ದೊರೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT