ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆನೆಗಳನ್ನು ಕಾಡಿಗಟ್ಟಲು ಸಹಕರಿಸಿ'

Last Updated 17 ಜುಲೈ 2013, 6:29 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಅರಣ್ಯ ಬಿಟ್ಟು ಕಾಫಿ ತೋಟದಲ್ಲಿ ತಂಗಿರುವ ಕಾಡಾನೆಗಳನ್ನು ಒಂದು ವಾರದೊಳಗೆ ಮರಳಿ ಕಾಡಿಗಟ್ಟಲಾಗುವುದು ಎಂದು ವಿರಾಜಪೇಟೆ ಉಪ ಅರಣ್ಯ ಸಂರಕ್ಷ ಣಾಧಿಕಾರಿ ಮಾಲತಿಪ್ರಿಯ ಹೇಳಿದರು.

ಸಮೀಪದ ತಿತಿಮತಿ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಮಂಗಳವಾರ ನಡೆದ ಕಾಫಿ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಆನೆ ಗಳನ್ನು ಕಾಡಿಗಟ್ಟುವ ಸಂದರ್ಭದಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಿಸ ಬೇಕಾಗುತ್ತದೆ. ಜತೆಗೆ ಸಾರ್ವಜನಿಕರು ಮತ್ತು ಕಾರ್ಮಿಕರಿಗೂ ಸೂಚನೆ ನೀಡ ಬೇಕಾಗಿದೆ. ಇದರ ಬಗ್ಗೆ  ಅರಣ್ಯಾಧಿಕಾರಿ ಗಳು ಮತ್ತು ಇತರ ಇಲಾಖಾ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ದಿನಾಂಕವನ್ನು ಗೊತ್ತುಪಡಿಸ ಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಕುಟ್ಟದಿಂದ ಕಾನೂರು, ತಿತಿಮತಿ ವರೆಗಿನ 60 ಕಿ.ಮೀ. ತನಕ ಅರಣ್ಯದ ಅಂಚಿನಲ್ಲಿ ಆನೆ ಕಂದಕ ತೋಡಲಾಗಿದೆ. 42 ಕಿ.ಮೀ. ಬಾಕಿ ಇದೆ. ಅನುದಾನ ಲಭಿಸಿದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ದೇವರಪುರದ ಕಾಫಿ  ಬೆಳೆಗಾರ ಎ.ಆರ್. ಕೃಷ್ಣಕುಮಾರ್ ಮಾತನಾಡಿ, 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಮಾಯಮುಡಿ, ದೇವರಪುರ, ಕೋಣನ ಕಟ್ಟೆ, ತಿತಿಮತಿ ಮೊದಲಾದ ಗ್ರಾಮಗಳ ವ್ಯಾಪ್ತಿಯ ಕಾಫಿ ತೋಟದಲ್ಲಿ ಸುತ್ತಾ ಡುತ್ತಿವೆ. ಕಾಡಾನೆ ಹಾವಳಿಯಿಂದ ಈಗಾಗಲೇ ಬತ್ತ ಕೃಷಿಯನ್ನು ಕೈಬಿಡಲಾಗಿದೆ. ಕಾಫಿ ತೋಟದಲ್ಲಿ ಇರುವ ಬಾಳೆ, ತೆಂಗು, ಅಡಿಕೆ ಮೊದಲಾದ ಬೆಳೆಯೂ ನಾಶವಾ ಗುತ್ತಿದೆ. ಇದರಿಂದ ಕೃಷಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.

ಸಣ್ಣುವಂಡ ಪೊನ್ನಪ್ಪ ಮಾತನಾಡಿ, ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳ ಬೇಕು ಎಂದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಕಾರ್ಯಪ್ಪ, ಬೆಳ್ಳಿಯಪ್ಪ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಗೋಪಾಲ್, ದೇವರಾಜ್, ಕಾಫಿ ಬೆಳೆಗಾರರಾದ ಮಲ್ಲೇಂಗಡ ಪ್ರಭಾ ಗಿರೀಶ್, ಸಿ.ಎ.  ತಮ್ಮಪ್ಪ, ಕೋದಂಡ ದೇವಯ್ಯ, ಸಿ.ಎಸ್. ಬೋಪಣ್ಣ, ಎಂ.ಎಸ್. ದೇವಯ್ಯ, ಪಿ.ಕೆ. ನಂಜಪ್ಪ ಇರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT