ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಕೊರತೆ: ಪರಿಹಾರ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್, (ಪಿಟಿಐ): ಆಮ್ಲಜನಕದ ಕೊರತೆ ಅಥವಾ ಉಸಿರಾಟದ ತೊಂದರೆಯಿಂದ ನರಳುವ ರೋಗಿಗಳಿಗೆ ಹಿಮಾಲಯ ಪರ್ವತಕ್ಕೆ ಪರ್ವತಾರೋಹಿಗಳು ಕೈಗೊಂಡ ಯಾತ್ರೆಯಿಂದ ವಿಜ್ಞಾನಿಗಳು ಪರಿಹಾರ ಕಂಡುಕೊಂಡಿದ್ದಾರೆ.

ಮೌಂಟ್ ಎವರೆಸ್ಟ್ ಯಾತ್ರಾರ್ಥಿಗಳು ಎತ್ತರಕ್ಕೆ ಹೋದಂತೆಲ್ಲ ಆಮ್ಲಜನಕದ ಕೊರತೆ ಎದುರಿಸುವಾಗ ಅವರ ದೇಹ ಮತ್ತು ರಕ್ತದಲ್ಲಾಗುವ ಬದಲಾವಣೆಯನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದರು.

ಸಮುದ್ರ ಮಟ್ಟಕ್ಕಿಂತ ಅತಿ ಎತ್ತರ ಅಥವಾ ಇಳಿಜಾರು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆಮ್ಲಜನಕದ ಕೊರತೆಯಾದಾಗ ಅವರ ದೇಹದೊಳಗಿನ ಜೀವಕಣಗಳಿಗೆ ನೈಸರ್ಗಿಕವಾಗಿ ನೈಟ್ರಸ್ ಆಕ್ಸೈಡ್ (ಎನ್‌ಒ) ಎಂಬ ಅನಿಲ ಉತ್ಪಾದಿಸುವ ಕ್ಷಮತೆ ಕಡಿಮೆ. ತೀವ್ರ ಉಸಿರಾಟದ ತೊಂದರೆ ಎದುರಿಸುವ ರೋಗಿಗಳ ಸ್ಥಿತಿಯೂ ಇದೇ ತೆರನಾಗಿರುತ್ತದೆ.

ಆಮ್ಲಜನಕದ ಕೊರತೆ ಎದುರಿಸುವ ವರಿಗೆ ನೈಟ್ರಸ್ ಆಕ್ಸೈಡ್ ಸಹಿತ ಔಷಧ ನೀಡಿದಾಗ ನೈಸರ್ಗಿಕವಾಗಿ ಆಮ್ಲಜನಕ ಉತ್ಪಾದನೆಗೆ ಪ್ರಚೋದಿಸುತ್ತದೆ ಎನ್ನುತ್ತಾರೆ ವೈದ್ಯ ವಿಜ್ಞಾನಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT