ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕ್ಕೆ ಒತ್ತು ನೀಡಲು ಚಾಲಕರಿಗೆ ಸಲಹೆ

Last Updated 4 ಏಪ್ರಿಲ್ 2013, 8:24 IST
ಅಕ್ಷರ ಗಾತ್ರ

ಉಡುಪಿ: `ಬಸ್ ಚಾಲಕರು, ನಿರ್ವಾಹಕರು ಸಮಯಕ್ಕೆ ಸರಿಯಾಗಿ ನಿರ್ದಿಷ್ಟ ಗುರಿ ತಲುಪಲು ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ. ಅವರ ಜೀವನ ಕ್ರಮದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕೆಡುತ್ತಿದ್ದು, ಆರೋಗ್ಯ ಕಾಪಾಡಲು ಅವರು ಒತ್ತು ನೀಡಬೇಕು' ಎಂದು ಆದರ್ಶ ಆಸ್ಪತ್ರೆಯ ಡಾ.ಜಿ.ಎಸ್. ಚಂದ್ರಶೇಖರ್ ಹೇಳಿದರು.

ಉಡುಪಿಯ ಜಯಂಟ್ಸ್ ಗ್ರೂಪ್, ಆದರ್ಶ ಆಸ್ಪತ್ರೆ ಮತ್ತು ಪ್ರಸಾದ್ ನೇತ್ರಾಲಯದ ಜಂಟಿ ಆಶ್ರಯದಲ್ಲಿ ಬಸ್ ಚಾಲಕರು- ನಿರ್ವಾಹಕರು, ರಿಕ್ಷಾ ಚಾಲಕರು- ಮಾಲೀಕರು ಮತ್ತು ಸಾರ್ವಜನಿಕರಿಗೆ ಇತ್ತೀಚೆಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಯಕ್ಕೆ ಸರಿಯಾಗಿ ಸಮತೋಲನ ಆಹಾರ, ಹೇರಳವಾಗಿ ನೀರು, ತರಕಾರಿ ಹಣ್ಣು ಹಂಪಲು ಸೇವಿಸಬೇಕು. ಒತ್ತಡ ನಿರ್ವಹಣೆ ಮಾಡಲು ಯೋಗ ಪ್ರಾಣಾಯಾಮ ಮಾಡಬೇಕು ಎಂದು ಅವರು ಕಿವಿ ಮಾತು ಹೇಳಿದರು.

ಪ್ರಸಾದ್ ನೇತ್ರಾಲಯದ ಕಣ್ಣಿನ ತಜ್ಞ ಡಾ.ಕೃಷ್ಣ ಪ್ರಸಾದ್, ಡಾ.ನಿತ್ಯಾನಂದ ನಾಯಕ್ ಇದ್ದರು.ಜಯಂಟ್ಸ್ ಅಧ್ಯಕ್ಷ ರಾಜೇಶ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ಸಂಘಟಕ ಜಯಂಟ್ಸ್ ಕಾರ್ಯದರ್ಶಿ ಮದುಸೂಧನ ಹೇರೂರು ಕಾರ್ಯಕ್ರಮ ನಿರೂಪಿಸಿದರು.  ನೇತ್ರ ತಪಾಸಣೆ, ರಕ್ತದೊತ್ತಡ, ರಕ್ತದ ಗುಂಪು, ಸಿಹಿಮೂತ್ರ ರೋಗ ಪರೀಕ್ಷೆ ತಪಾಸಣೆ  ಮಾಡಲಾಯಿತು.

ನೂರಾರು ಮಂದಿ ತಪಾಸಣಾ ಶಿಬಿರದ ಉಪಯೋಗ ಪಡೆದುಕೊಂಡರು. ಆದರ್ಶ ಆಸ್ಪತ್ರೆ ಮತ್ತು ಪ್ರಸಾದ್ ನೇತ್ರಾಲಯದ ಸಿಬ್ಬಂದಿ ವರ್ಗ ಸಹಕರಿಸಿದರು. ಜಯಂಟ್ಸ್ ಕಾರ್ಯಕಾರಿ ನಿರ್ವಾಹಕ ಗೋಪಾಲ್ ಆರ್.ಕೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT