ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು ವೆಂಕಟರಾಯರ ಜನ್ಮದಿನ ಇಂದು

Last Updated 12 ಜುಲೈ 2012, 8:30 IST
ಅಕ್ಷರ ಗಾತ್ರ

ಹೊಳೆಆಲೂರ(ರೋಣ): ಸಾಮಾನ್ಯ ಮನೆತನದಲ್ಲಿ ಜನಿಸಿ, ಅಸಾಮಾನ್ಯ ಸಾಧನೆಯನ್ನು ಮಾಡಿದ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾಯರನ್ನು ಅರಿಯದ ಕನ್ನಡಿಗರಿಲ್ಲ.  

 ಸ್ಮರಣೀಯರಾದ ಅವರನ್ನು ನೆನೆಯುವುದೇ ಒಂದು ರೋಮಾಂಚನಕಾರಿ ಅನುಭವ. ತಮ್ಮ ಜೀವನದುದ್ದಕ್ಕೂ ಕರ್ನಾಟಕತ್ವವನ್ನು ಜಪಿಸಿದ ಅವರಿಗೆ ಕನ್ನಡ ಉಸಿರಾಗಿತ್ತು. ಅವರಿಗೆ ಜೀವಿತದ ಗುರಿ ಕರ್ನಾಟಕ ಏಕೀಕರಣ, ಕರ್ನಾಟಕ ನಿರ್ಮಾಣದ ಕಲ್ಪನೆಯ ಹೊರತು ಬೇರೇನೂ ಆಗಿರಲಿಲ್ಲ.

ಕರ್ನಾಟಕ ಏಕೀಕರಣದ ಕಿಡಿ ಹೊತ್ತಿದ್ದು ಮತ್ತು ಅದು ಅಸ್ತಿತ್ವಕ್ಕೆ ಬಂದದ್ದು ಧಾರವಾಡದ ನೆಲದಿಂದ. ಕರ್ನಾಟಕದ ಗತವೈಭವದ ಕನಸನ್ನು ಕಂಡು, ಕನ್ನಡದ ಪಾಂಚಜನ್ಯವನ್ನು ಮೊಳಗಿಸಿದ ಈ ಕನ್ನಡ ಪುರೋಹಿತ ಆಲೂರ ವೆಂಕಟರಾಯರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆಆಲೂರವರು. 

ಮೂಲತಃ ಬಳ್ಳಾರಿ ಜಿಲ್ಲೆಯವರಾದರೂ ಈ ಮನೆತನದ ಹಿರಿಯರು ಧಾರವಾಡಕ್ಕೆ ಬಂದು ನೆಲೆಸಿದರು. ಆಗ ವೆಂಕಟರಾಯರ ಅಜ್ಜ ಹೊಳೆ ಆಲೂರಿನಲ್ಲಿ ಅವರ ಅಳಿಯನ ಜಹಗೀರ್ ಅನ್ನು ನೋಡಿಕೊಳ್ಳುತ್ತಿದ್ದರು. ಹೀಗಾಗಿ ಅವರಿಗೆ ಆಲೂರ ಎಂಬ ಹೆಸರು ಅಂಟಿಕೊಂಡಿತು.

ವೆಂಕಟರಾಯರು ವಿದ್ಯಾರ್ಥಿ ದೆಸೆಯಲ್ಲೆ ಬಾಲಗಂಗಾಧರ ತಿಲಕರಿಂದ ಪ್ರಭಾವಿತರಾಗಿದ್ದರು. ವೆಂಕಟರಾಯರನ್ನು ಹಂಪೆ ಮತ್ತು ಆನೆಗೊಂದಿಯ ಪರಿಸರದಲ್ಲಿ  ಗಜೇಂದ್ರಗಡದ ಬಾಳಚಾರ್ಯ ಗಂಜೆಂದ್ರಗಡಕರರು ಮತ್ತು ಮನೆ ಗುರುಗಳಾದ ಸಮೀರನಾಚಾರ್ಯರ ಪಾಂಗರಿ ಅವರು ಕರೆದುಕೊಂಡು ಸುತ್ತಾಡಿದರು. 

 ಕರ್ನಾಟಕ ಬಗೆಗಿನ ಅಭಿಮಾನ ಶೂನ್ಯತೆಯೇ ಈ ನಾಡಿನ ದುಸ್ಥಿತಿಗೆ ಕಾರಣವೆಂದು ಅರಿತು, ಈ ನಾಡಿನ ಗತವೈಭವವನ್ನು ಕನ್ನಡಿಗರ ಮುಂದಿಡುವುದೇ ಉಪಾಯವೆಂದು ಮನಗಂಡರು. ಹಂಪೆಯ ಆರಾಧ್ಯ ದೇವರಾದ ವಿರೂಪಾಕ್ಷ ಹಾಗೂ ಭುವನೇಶ್ವರಿಯ ಸಾನ್ನಿಧ್ಯದಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಸಂಕಲ್ಪ ತೊಟ್ಟರು. 

   ಸ್ಮಾರಕ ಭವನ: ಶಾಸಕ ಸಿ.ಸಿ.ಪಾಟೀಲ ಅವರ ಮುತುವರ್ಜಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರೂ. 1ಕೋಟಿ 15 ಲಕ್ಷ ಅನುದಾನ ಪಡೆದು ಆಲೂರ ವೆಂಕಟ ರಾಯರ ಸ್ಮಾರಕ ಭವನವನ್ನು ಗ್ರಾಮದ ಗಾಡಗೋಳಿ ರಸ್ತೆಯ ಬಲಬದಿಯಲ್ಲಿ ಕಟ್ಟಡದ ನಿರ್ಮಾಣ ಪ್ರಾರಂಭಗೊಂಡಿದೆ. ಅದನ್ನು ಕೆ.ಆ.ಐ.ಡಿ.ಎಲ್.ಗದಗ  (ಗದಗ ಭೂಸೇನಾ ನಿಗಮ) ಕಟ್ಟಡದ ನಿರ್ಮಾಣ ಕಾರ್ಯವನ್ನು ಕೈಕೊಂಡಿದೆ  ಎಂದು ನಿಗಮದ ಕೆ.ಆರ್.ಡಿ.ಐ.ಎಲ್ ಅಧಿಕಾರಿ ಆರ್.ವಿ.ಪತ್ತಾರ ಹೇಳುತ್ತಾರೆ.

ಭವನದಲ್ಲಿ  ವಸ್ತು ಸಂಗ್ರಹಾಲಯ, ಆರ್ಟ ಗ್ಯಾಲರಿ, ಗ್ರಂಥಾಲಯ, ಸಭಾಂಗಣ ಗ್ರೀನ್ ರೂಮ್ ಸೇರಿದಂತೆ ಸಭಾಂಗಣದ ಪ್ರವೇಶ ದ್ವಾರದಲ್ಲಿ ವೆಂಕಟರಾಯರ ಮೂರ್ತಿ ಪ್ರತಿಷ್ಠಾಪನೆ ಮಾಡ ಲಾಗುವುದು ಹೊಳೆಆಲೂರ ಗ್ರಾ.ಪಂ ಅಧ್ಯಕ್ಷ ಜಗದೀಶ ಬ್ಯಾಡಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT