ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯ ಕಾಣದ ಕುಟುಂಬಗಳ ಆಕ್ರಂದನ

Last Updated 12 ಜನವರಿ 2012, 9:45 IST
ಅಕ್ಷರ ಗಾತ್ರ

ಅಫಜಲಪುರ: ಸರ್ಕಾರ ಸುಮಾರು 20 ವರ್ಷಗಳಿಂದಲೂ ಹಲವಾರು ಯೋಜನೆಗಳ ಮುಖಾಂತರ ವಸತಿ ಹೀನರಿಗೆ ಮನೆಗಳನ್ನು ನೀಡುತ್ತಿದ್ದರೂ ಇನ್ನೂ ತಾಲ್ಲೂಕಿನಲ್ಲಿ ವಸತಿ ರಹಿತರ ಸಮಸ್ಯೆ ಬಗೆಹರಿಯದೆ ಪ್ರತಿ ಗ್ರಾಮದಲ್ಲಿಯೂ ನೂರಾರು ಕುಟುಂಬಗಳು ಆಶ್ರಯವಿಲ್ಲದೆ ಬದು ಸಾಗಿಸುತ್ತಿರ ನೋಟ ಸಾಮಾನ್ಯವಾಗಿದೆ.

ಸರ್ಕಾರ  ತಾಲ್ಲೂಕು ಪಂಚಾಯತಿ ಅಂದಾಜು ವರದಿ ಪ್ರಕಾರ 20 ವರ್ಷಗಳಲ್ಲಿ 20 ಸಾವಿರ ಕ್ಕಿಂತಲೂ ಹೆಚ್ಚು ಮನೆಗಳನ್ನು ಮಂಜೂರು ಮಾಡಿದೆ. ಮಂಜೂರು ಮಾಡಿದ ಮನೆಗಳನ್ನು ಸರಿಯಾಗಿ ವಿತರಣೆಯಾಗಿಲ್ಲ ಹಲವಾರು ಗ್ರಾಮಗಳಲ್ಲಿ ಏಜನ್ಸಿಗಳು ಕಟ್ಟಿರುವ ಮನೆಗಳಲ್ಲಿ ವಾಸ ಮಾಡುತ್ತಿಲ್ಲ. ಇನ್ನೊಂದು ಕಡೆ ಮನೆಗಾಗಿ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಚವಡಾಪೂರ ಹೊರ ವಲಯ, ಬಂದರವಾಡ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಆಶ್ರಯ ಮನೆ ನಿರ್ಮಾಣ ಮಾಡಲಾಗಿದೆ. ಆದರೆ ಆ ಮನೆಗಳಲ್ಲಿ ಜನರು ವಾಸ ಮಾಡುತ್ತಿಲ್ಲ ಕಾರಣ ಮೂಲ ಸೌಲಭ್ಯಗಳ ಕೊರತೆ, ಮನೆ ಕಳಪೆಯಾಗಿ ಬಿದ್ದು ಹೋಗಿವೆ ಅಲ್ಲದೆ ಮನೆ ಇದ್ದವರಿಗೆ ಮನೆ ನೀಡಲಾಗಿದೆ. ಈ ಎಲ್ಲ ಕಾರಣಗಳಿಂದ ಆಶ್ರಯ ಮನೆಗಳು ಹಾಳಾಗಿವೆ ಎಂದು ಹೇಳಲಾಗುತ್ತಿದೆ.

ಗ್ರಾಮ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು ಈ ಹಿಂದೆ ಮನೆ ಹಂಚಿಕೆ ಮಾಡುವಾಗ ಹೆಚ್ಚಿನ ಗ್ರಾಮ ಪಂಚಾಯತಿಗಳು ಗ್ರಾಮ ಸಭೆಗಳನ್ನು ಮಾಡದೆ ಮನೆ ವಿತರಣೆ ಮಾಡಲಾಗಿದೆ. ಸಾಕಷ್ಟು ಕಡೆ ಕಟ್ಟಿರುವ ಮನೆಗಳ ಪೋಟ್‌ಗಳನ್ನು ತೋರಿಸಿ ಅನುದಾನ ಎತ್ತಿ ಹಾಕಲಾಗಿದೆ. ಹೀಗಾಗಿ ಕಾಗದದಲ್ಲಿಯೆ ಮನೆಗಳ ನಿರ್ಮಾಣ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಸುಮಾರು 3 ಸಾವಿರ ಮನೆಗಳನ್ನು ಪ್ರತಿ ಗ್ರಾಮಗಳಿಗೆ ತೆರಳಿ ಗುಡಿಸಲುಗಳಿಗೆ ಭೇಟಿ ನೀಡಿ ಯಾರು ಗುಡಿಸಲಿನಲ್ಲಿ ವಾಸ ಮಾಡಿದ್ದಾರೆ.

ಅವರಿಗೆ ಮನೆ ನೀಡಿದ್ದಾರೆ, ಆದರೆ ಇದರಲ್ಲಿಯೂ ಅನುಮಾನದ ಹೊಗೆ ಆಡುತ್ತಿದೆ. ಅಂದರೆ ಮನೆ ಹೊಂದಿದವರು ಗ್ರಾಮದ ಹೊರ ವಲಯದಲ್ಲಿ ಜಾನುವಾರ ಕಟ್ಟಲು ಇತರೆ ಕೆಲಸಕ್ಕಾಗಿ ಗುಡಿಸಲಗಳು ಹಾಕಿದ್ದಾರೆ. ಇದನ್ನು ಆಧರಿಸಿ ಅವರಿಗೆ ಮನೆ ಮಂಜೂರು ಮಾಡಲಾಗಿದೆ.

ಇದರ ಬಗ್ಗೆಯೂ ಶಾಸಕರು ಪುನಃ ಪರಿಶೀಲನೆ ಮಾಡಿದರೆ ಮತ್ತಷ್ಟು ಬಡವರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT