ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಮತ್ತು ವೈನ್‌ಗೆ...

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನಿಶೆ ಏರಿಸುವ ಮದಿರೆ, ಜೊತೆಗೊಂದಿಷ್ಟು ಕರಿದ ತಿನಿಸಿದ್ದರೆ ಅದಕ್ಕಿಂತ ಸ್ವರ್ಗ ಬೇರೊಂದಿಲ್ಲ. ಬಗೆಬಗೆಯ ಮದ್ಯ, ಜತೆಗೆ ನಂಜಿಕೊಳ್ಳಲು ಮಾಂಸಾಹಾರ, ಸಸ್ಯಾಹಾರ ಖಾದ್ಯಗಳು ಇದ್ದರೆ ಡಬ್ಬಲ್ ಧಮಾಕಾ.

ಇವೆರಡರ ಅಭೂತ ಪೂರ್ಣ ಸಂಗಮವೇ `ಅಪ್ಪರ್ ಕ್ರಸ್ಟ್~ ಆಹಾರ ಮತ್ತು ವೈನ್ ಪ್ರದರ್ಶನ. ಮುಂಬೈಯ ಛಾಯಾಗ್ರಾಹಕಿ, ಪತ್ರಕರ್ತೆ ಫರ್ಜಾನಾ ಬೆರ್ಹಾಂ ಕಂಟ್ರಾಕ್ಟರ್ ಆಯೋಜಿಸಿದ ಮೇಳಕ್ಕೆ ಶುಕ್ರವಾರ ಫ್ಯಾಶನ್ ಗುರು ಪ್ರಸಾದ್ ಬಿಡ್ಡಪ್ಪ, ಫ್ಯಾಶನ್ ಡಿಸೈನರ್‌ಗಳಾದ ಸಂಚಿತಾ ಅಜ್ಜಂಪುರ್, ಮನೋವಿರಾಜ್ ಖೋಸ್ಲಾ ಚಾಲನೆ ನೀಡಿದರು.

ಹುಲ್ಲು ಹಾಸಿನ ನಡುವೆ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ಪಾಕ ಪ್ರವೀಣರಾದ ಮಣಿ ಪಾಠಕ್, ಜಾಹೀರ್ ಖಾನ್ ಆರೋಗ್ಯಕರ ತಿನಿಸುಗಳನ್ನು ತಯಾರಿಸುವ ಬಗೆಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿದರು.

ಬೆಂಗಳೂರಿನ ಐಶಾರಾಮಿ ಹೋಟೆಲ್‌ಗಳ ಪ್ರತ್ಯೇಕ ಮಳಿಗೆಗಳು ಈ ಮೇಳದಲ್ಲಿದೆ. ವಿವಿಧ ಬಗೆಯ ರುಚಿಕರ ಖಾದ್ಯಗಳು, ವಿಶ್ವ ದರ್ಜೆಯ ಬ್ರಾಂಡೆಡ್ ವೈನ್‌ಗಳು ಇಲ್ಲಿ ಲಭ್ಯ. ಮೇಳದಲ್ಲಿ ಭೋಜನ ಪ್ರಿಯರು ಸ್ಪಾನಿಶ್, ಚೈನೀಸ್, ಅಮೆರಿಕನ್ ಹಾಗೂ ಭಾರತೀಯ ಶೈಲಿಯ ಆಹಾರ ಪದಾರ್ಥಗಳನ್ನು ಸವಿಯಬಹುದು.

ಶನಿವಾರ ತಾರಾ ಹೋಟೆಲ್ ಶೆಫ್‌ಗಳಾದ ಗಿವನ್ನಿ ಬಟ್ಟೀಸ್ಟ, ಜಾರ್ಜ್ ಜಯಸೂರ್ಯ ತಮ್ಮ ಕೈಚಳಕ ಪ್ರದರ್ಶಿಸಲಿದ್ದಾರೆ.

ಭಾನುವಾರ ಶೆಫ್‌ಗಳಾದ ಮಾಕೊ ರವೀಂದ್ರನ್, ಅಭಿಜಿತ್ ಶಾ, ಸಂದೀಪ್ ಬಿಸ್ವಾಸ್ ಭಾರತೀಯ ಶೈಲಿಯ ಆಹಾರ ಹಾಗೂ ಚೀಸ್ ಡಿಲೈಟ್ ತಯಾರಿಸುವ ಬಗೆಯನ್ನು ತೋರಿಸಲಿದ್ದಾರೆ. ಸ್ಥಳ: ಲಲಿತ್ ಅಶೋಕ, ಕುಮಾರಕೃಪಾ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT