ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಕಾದಂಬರಿ ಲೋಕಾರ್ಪಣೆ

Last Updated 6 ಡಿಸೆಂಬರ್ 2012, 19:27 IST
ಅಕ್ಷರ ಗಾತ್ರ

ಬೆಂಗಳೂರು: `ಪಶ್ಚಿಮ ಏಷ್ಯಾದ ಕ್ರಾಂತಿಯೊಂದಿಗೆ ಮನುಷ್ಯನ ಆಳದಲ್ಲೇಳುವ ತೊಳಲಾಟವನ್ನು ಕಾದಂಬರಿಯಾಗಿಸಿದ್ದೇನೆ' ಎಂದು ಕಾದಂಬರಿಕಾರ ಜಾನ್ ಡಿ ಬಲಿಯನ್ ತಿಳಿಸಿದರು.

ಬೆಂಗಳೂರು ಸಾಹಿತ್ಯ ಹಬ್ಬವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಜಾನ್ ಡಿ ಬಲಿಯನ್ ಅವರ  `ಗ್ರೇ ವೋಲ್ವ್ಸ್ ಆ್ಯಂಡ್ ವೈಟ್ ಡವ್ಸ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದು.

`ಉದಾರೀಕರಣವು ಕಣ್ಣು ಬಿಡುವ ಕಾಲಘಟ್ಟದಲ್ಲಿ ಸ್ವೀಡನ್ ಮತ್ತು ಪ್ಯಾರಿಸ್‌ಗಳಲ್ಲಿ ನಡೆಯುವ ಕಥನದಲ್ಲಿ ಬಾಲಕನೊಬ್ಬ ಹಲವು ವೈರುಧ್ಯಗಳನ್ನು ಅನುಭವಿಸುತ್ತಾನೆ. ಇದನ್ನೇ ಕೃತಿಯ ರೂಪಕ್ಕೆ ಇಳಿಸಿದ್ದೇನೆ. ಬಾಲಕನ ಪಾತ್ರ ನಾಗರಿಕ ಮನೋಭಾವದ ಪ್ರತಿನಿಧಿಯಾಗಿ ಉಳಿಯುತ್ತದೆ' ಎಂದು ಹೇಳಿದರು.

`ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲಿಕ ಅಂಶಗಳು ಎಲ್ಲ ಕಾಲಘಟ್ಟದಲ್ಲೂ ಅಳವಡಿಕೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವ ಸಂಘಟನೆಗಳು ಕೂಡ  ಪ್ರಜಾಪ್ರಭುತ್ವದ ವಿರೋಧಿ ನಿಲುವನ್ನು ಹೊಂದಿರುವ ಸಾಧ್ಯತೆಯಿರುತ್ತದೆ. ಇವುಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ' ಎಂದು ತಿಳಿಸಿದರು.

ಚೀನಾದಲ್ಲಿನ ಭಾರತದ ಮಾಜಿ ರಾಯಭಾರಿ ಸಿ.ವಿ.ರಂಗನಾಥನ್, `ಕ್ರಾಂತಿಯೊಂದಿಗೆ ಬೆಸೆದುಕೊಂಡ ಸಾಮಾಜಿಕ ಬದ್ಧತೆ ಹಾಗೂ ನಾಗರಿಕ ಸಮಸ್ಯೆಯನ್ನು ಒಳಗೊಂಡ ಕೃತಿಯು ಸಾರ್ವಕಾಲಿಕ ಗುಣವನ್ನು ಹೊಂದಿರುತ್ತದೆ' ಎಂದು ತಿಳಿಸಿದರು. ಲೇಖಕಿ ಜಾಹ್ನವಿ ಬರುವಾ,  ಉದ್ಯಮಿ ಹರೀಶ್ ಬಿಜೂರ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT