ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ಸವಾಲಿನ ಗುರಿ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದುಬೈ (ಎಎಫ್‌ಪಿ): ಪಾಕಿಸ್ತಾನ ವಿರುದ್ಧ ಮೊದಲ ಬಾರಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ `ಕ್ಲೀನ್ ಸ್ವೀಪ್~ ಮುಖಭಂಗದಿಂದ ಪಾರಾಗಲು ಇಂಗ್ಲೆಂಡ್ ಕಠಿಣ ಪ್ರಯತ್ನ ನಡೆಸಬೇಕಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ಪಾಕ್ ತಂಡ ಇಂಗ್ಲೆಂಡ್ ಗೆಲುವಿಗೆ 324 ರನ್ ಗುರಿ ನೀಡಿದೆ.

ಈ ಮೊತ್ತ ಬೆನ್ನಟ್ಟಿರುವ ಇಂಗ್ಲೆಂಡ್ ಮೂರನೇ ದಿನವಾದ ಭಾನುವಾರದ ಆಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿತ್ತು. ಅಂದರೆ ಗೆಲುವಿಗೆ ಇನ್ನೂ 288 ರನ್‌ಗಳು ಬೇಕು. ಎರಡು ದಿನಗಳ ಆಟ ಬಾಕಿಯಿವೆ. ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ (19) ಮತ್ತು ಅಲಸ್ಟರ್ ಕುಕ್ (15) ಭರವಸೆಯ ಆರಂಭ ನೀಡಿದ್ದಾರೆ.

ಇದಕ್ಕೂ ಮುನ್ನ ಎರಡು ವಿಕೆಟ್‌ಗೆ 222 ರನ್‌ಗಳಿಂದ ಆಟ ಆರಂಭಿಸಿದ ಪಾಕಿಸ್ತಾನ 365 ರನ್‌ಗಳಿಗೆ ಆಲೌಟಾಯಿತು. ಅಜರ್ ಅಲಿ (157, 442 ಎಸೆತ, 10 ಬೌಂ, 1 ಸಿಕ್ಸರ್) ಅವರ ಆಕರ್ಷಕ ಶತಕ ಪಾಕ್ ತಂಡದ ಉತ್ತಮ ಮೊತ್ತಕ್ಕೆ ಕಾರಣ. ಎರಡನೇ ದಿನ 115 ರನ್‌ಗಳೊಂದಿಗೆ ಆಡುತ್ತಿದ್ದ ಯೂನಿಸ್ ಖಾನ್ 127 ರನ್ ಗಳಿಸಿ ಔಟಾದರು.

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: ಮೊದಲ ಇನಿಂಗ್ಸ್ 99 ಮತ್ತು ಎರಡನೇ ಇನಿಂಗ್ಸ್ 152.4 ಓವರ್‌ಗಳಲ್ಲಿ 365 (ಅಜರ್ ಅಲಿ 157, ಯೂನಿಸ್ ಖಾನ್ 127, ಮಿಸ್ಬಾ ಉಲ್ ಹಕ್ 31, ಮಾಂಟಿ ಪನೇಸರ್ 124ಕ್ಕೆ 5, ಗ್ರೇಮ್ ಸ್ವಾನ್ 101ಕ್ಕೆ 3). ಇಂಗ್ಲೆಂಡ್: ಮೊದಲ ಇನಿಂಗ್ಸ್ 141 ಮತ್ತು ಎರಡನೇ ಇನಿಂಗ್ಸ್ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 36.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT